Tuesday, April 30, 2024
spot_imgspot_img
spot_imgspot_img

ಪುತ್ತೂರು: ದೇವಸ್ಥಾನದ ವಠಾರದಲ್ಲಿದ್ದ ಅಂಗಡಿ ಏಕಾಏಕಿ ತೆರವು; ಆಡಳಿತಾಧಿಕಾರಿಗಳ ಮತ್ತು ಟ್ರಸ್ಟಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

- Advertisement -G L Acharya panikkar
- Advertisement -
vtv vitla

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಅಂಗಡಿಯನ್ನು ಏಕಾಏಕಿ ತೆರವುಗೊಳಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನದ ಜಾಗದಲ್ಲಿ ಬಡ ಕುಟುಂಬವೊಂದು ಹಣ್ಣುಕಾಯಿ ಅಂಗಡಿ ತೆರೆದು ಜೀವನ ನಡೆಸುತ್ತಿದ್ದರು. ಎರಡು ಪುಟ್ಟ ಮಕ್ಕಳೊಂದಿಗೆ ವಾಸವಿದ್ದ ಈ ಕುಟುಂಬ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹಣ್ಣು ಕಾಯಿ ಮಾರಾಟ ಮಾಡುತ್ತಿದ್ದು, ಇದರಿಂದಲೇ ತಮ್ಮ ಜೀವನ ನಡೆಸುತಿದ್ದರು.

ಇಂದು ಬೆಳಿಗ್ಗೆ ದೇವಸ್ಥಾನದ ಆಡಳಿತಾಧಿಕಾರಿಗಳು ಅಂಗಡಿಗೆ ಬಂದು ಏಕಾಏಕಿ ಅಂಗಡಿಯನ್ನು ತೆರವುಗೊಳಿಸಬೇಕೆಂದು ಹೇಳಿ ತಕ್ಷಣವೇ ಅಂಗಡಿಯಲ್ಲಿದ್ದ ವಸ್ತುಗಳನ್ನು ಎಸೆದು ಅಂಗಡಿಯನ್ನು ಡೆಮಾಲಿಶ್ ಮಾಡುವ ಕೆಲಸವನ್ನು ಮಾಡಿದ್ದಾರೆ. ಇದರಿಂದ ಅಸಹಾಯಕ ಪರಿಸ್ಥಿತಿಯಲ್ಲಿರುವ ಈ ಬಡ ಕುಟುಂಬ ಬೀದಿಗೆ ಬಂದು ನಿಂತಿದೆ.

ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು “ದೇವಸ್ಥಾನದ ಜಾಗ ಕಾನೂನು ಬದ್ಧವಾಗಿಲ್ಲದಿದ್ದಾರೆ ತೆರವು ಮಾಡಬಹುದು, ಈ ಬಡ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಕಾನೂನು ಬದ್ಧವಾಗಿ ತೆರವುಗೊಳಿಸಬೇಕಿತ್ತು. ತಿಂಗಳಿಗೆ ಸುಮಾರು 7,500ರೂ ಬಾಡಿಗೆಯನ್ನು ತೆಗೆದುಕೊಂಡು ವ್ಯಾಪಾರಿಗೆ ವಿಷಯವನ್ನು ತಿಳಿಸದೆ ಅಂಗಡಿಯ ವಸ್ತುಗಳನ್ನು ಬಿಸಾಡುವುದು ಎಷ್ಟು ಸರಿ..? ಇದು ಹಿಂದೂ ಸಮಾಜ ಒಪ್ಪುವಂತ ಕೆಲಸವಲ್ಲ. ಈ ಕುಟುಂಬಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಜೀವನೋಪಾಯಕ್ಕಾಗಿ ಸೂಕ್ತ ದಾರಿಯನ್ನು ಮಾಡಿಕೊಡಬೇಕು ಈ ಬಗ್ಗೆ ದೇವಸ್ಥಾನದ ಅಧ್ಯಕ್ಷರು, ಟ್ರಸ್ಟಿಗಳು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಗಮನ ಹರಿಸಿಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!