Saturday, June 20, 2026
spot_imgspot_img
spot_imgspot_img

ಪುತ್ತೂರು: (ಜ.13) “ನಮ್ಮಯ ಹಕ್ಕಿ ಕಳ್ಕೊಂಡ್ಡಿಟ್ಟೆ ನಿಮ್ಮಯ ಹಕ್ಕಿ ಕಾಪಾಡ್ಕೊಳ್ಳಿ” ಎಂಬ ಲವ್ ಜಿಹಾದ್ ಕುರಿತ ಪ್ರದರ್ಶಿನಿ ಮತ್ತು ಸಭಾ ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ ವಿಶ್ವ ಹಿಂದು ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಪುತ್ತೂರು ಇದರ ಸಹಯೋಗದಲ್ಲಿ “ನಮ್ಮಯ ಹಕ್ಕಿ ಕಳ್ಕೊಂಡ್ಡಿಟ್ಟೆ ನಿಮ್ಮಯ ಹಕ್ಕಿ ಕಾಪಾಡ್ಕೊಳ್ಳಿ” ಎಂಬ ಲವ್ ಜಿಹಾದ್ ಕುರಿತ ಪ್ರದರ್ಶಿನಿ ಮತ್ತು ಸಭಾ ಕಾರ್ಯಕ್ರಮ ಜ.13 ರಂದು ಸಂಜೆ 4ಕ್ಕೆ ಪುತ್ತೂರಿನ ಟೌನ್ ಹಾಲ್ ನಲ್ಲಿ ನಡೆಯಲಿದೆ.

ಇತ್ತೀಚೆಗೆ ಪ್ರೀತಿಯ ಸೋಗಿನಲ್ಲಿ ಮುಸ್ಲಿಂ ಹುಡುಗನ ಬಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ, ಅತ್ಯಾಚಾರಕ್ಕೆ ಒಳಗಾಗುವ, ಕೊಲೆಯಾಗುವ ಹಿಂದೂ ಹೆಣ್ಣುಮಕ್ಕಳ ಅನೇಕ ಘಟನೆಗಳನ್ನು ನೋಡುತ್ತಿದ್ದೇವೆ. ದೆಹಲಿಯಲ್ಲಿ ನಡೆದ ಶ್ರದ್ಧಾ ಪ್ರಕರಣ ನೋಡಿದ ಮೇಲಾದರೂ ಹೆಣ್ಣು
ಮಕ್ಕಳು, ಪೋಷಕರು ಹಾಗೂ ಸಮಾಜ ಗಂಭೀರವಾಗಿ ಯೋಚಿಸಬೇಕಾಗಿದೆ.

ಹಾಗಾಗಿಯೇ ಲವ್‌ಜಿಹಾದ್‌ನ ಆಳ-ಅಗಲವನ್ನು ವಿವರಿಸುವ ಅನೇಕ ಘಟನೆಗಳನ್ನು ಎಳೆ-ಎಳೆಯಾಗಿ ತೆರೆದಿಟ್ಟು ಜಾಗೃತಿ ಮೂಡಿಸುವ ಹಾಗೂ ವಿಚಾರದ ಕುರಿತಂತೆ ಚಿತ್ರ ಪ್ರದರ್ಶನ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಇವರು ಪ್ರಮುಖ ಭಾಷಣ ಮಾಡಲಿದ್ದಾರೆ.

- Advertisement -

Related news

error: Content is protected !!