Friday, March 29, 2024
spot_imgspot_img
spot_imgspot_img

ಪುತ್ತೂರು: ಬಸ್‌ ನಿಲ್ದಾಣದಲ್ಲಿ ಕರ್ತವ್ಯ ನಿರತ ಟಿಸಿಗೆ ಪ್ರಯಾಣಿಕನಿಂದ ಹಲ್ಲೆ

- Advertisement -G L Acharya panikkar
- Advertisement -
suvarna gold

ಪುತ್ತೂರು: ಕರ್ತವ್ಯ ನಿರತ ಕೆಎಸ್ಸಾರ್ಟಿಸಿಯ ಬಸ್ ಸಂಚಾರ ನಿಯಂತ್ರಣಾಧಿಕಾರಿಗೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿ ನಡೆಸಿದ ಘಟನೆ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಜ.13ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಸುಬ್ರಹ್ಮಣ್ಯ ಭಟ್ ಹಲ್ಲೆಗೊಳಗಾದವರು. ಸುರತ್ಕಲ್ ನಿವಾಸಿ ಅಶ್ರಫ್ ಹಲ್ಲೆ ನಡೆಸಿದ ಆರೋಪಿ.

ಹಲ್ಲೆಗೆ ಒಳಗಾದ ಸುಬ್ರಹ್ಮಣ್ಯ ಭಟ್ ಅವರು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪುತ್ತೂರು ನಗರ ಠಾಣೆಗೆ ಹಲ್ಲೆ ಬಗ್ಗೆ ದೂರು ನೀಡಿದ್ದಾರೆ.

ತಾನು ಕರ್ತವ್ಯ ನಿರತನಾಗಿದ್ದ ಸಂದರ್ಭ ಪ್ರಯಾಣಿಕರೊರ್ವರು ಕಾಂಞಗಾಡಿಗೆ ಹೋಗುವ ಕೇರಳದ ಬಸ್ ಮಾಹಿತಿ ಕೇಳಿದ್ದಾರೆ. ಅವರಿಗೆ ಮಾಹಿತಿ ನೀಡಿದ್ದೆ.
ಅದರೆ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಆಗಮಿಸಿದ ಪ್ರಯಾಣಿಕ ನನಗೆ ಹಲ್ಲೆ ನಡೆಸಿ ಬೆದರಿಯೊಡ್ಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಸುಬ್ರಹ್ಮಣ್ಯ ಭಟ್ ಅವರು ಆರೋಪಿಸಿದ್ದಾರೆ.

vtv vitla
vtv vitla

ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಯಾಣಿಕನು ತನ್ನ ಹೆಂಡತಿ ಮನೆ ಕಾಂಞಂಗಾಡಿಗೆ ತೆರಳುವ ಉದ್ದೇಶದಿಂದ ಬಸ್ಸು ನಿಲ್ದಾಣಕ್ಕೆ ಬಂದಿದ್ದು ಈ ವೇಳೆ , ಬಸ್ಸಿನ ವೇಳೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿರುವುದಾಗಿ ಸ್ಥಳದಲ್ಲಿದ್ದ ಸಾರ್ವಜನಿಕರು ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!