Thursday, April 25, 2024
spot_imgspot_img
spot_imgspot_img

ಪುತ್ತೂರು: ಯುವ ಗೌಡ ಸಂಘದ ಪುತ್ತೂರು ತಾಲೂಕು ಪದಾಧಿಕಾರಿಯಿಂದ ಬಂಟ ಸಮುದಾಯದ ವಿರುದ್ಧ ಅನೈತಿಕ ಪದ ಬಳಕೆ.! ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಕಾವು ಹೇಮನಾಥ ಶೆಟ್ಟಿ ಆಗ್ರಹ

- Advertisement -G L Acharya panikkar
- Advertisement -

ಪುತ್ತೂರು : ಯುವ ಗೌಡ ಸಂಘದ ಪುತ್ತೂರು ತಾಲೂಕು ಪದಾಧಿಕಾರಿ ನಾಗೇಶ್ ಕೆಡೆಂಜಿಯವರು ಬಂಟ ಸಮುದಾಯದ ವಿರುದ್ಧ ಅನೈತಿಕ ಪದಗಳನ್ನು ಬಳಕೆ ಮಾಡಿ ಎರಡು ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಆತ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ನಿರ್ದೇಶನ ನೀಡಿ ಎಂದು ಒಕ್ಕಲಿಗ ಗೌಡ ಸಮಾಜದ ಪುತ್ತೂರು ತಾಲೂಕು ಅಧ್ಯಕ್ಷರಿಗೆ, ಬಂಟರ ಯಾನೆ ನಾಡವರ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಅಗ್ರಹಿಸಿದ್ದಾರೆ.

ನಾಗೇಶ್ ಕೆಡೆಂಜಿಯವರು ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಸಭೆಯಲ್ಲಿ ನಾಗೇಶ್ ಅವರು ಬಂಟ ಸಮುದಾಯದ ವಿರುದ್ಧ ಅನೈತಿಕ ಪದಗಳನ್ನು ಬಳಕೆ ಮಾಡಿದ್ದಾರೆ. ಬಂಟ ಸಮುದಾಯವನ್ನು ಇತರೇ ಸಮುದಾಯದೆದುರು ತುಚ್ಚವಾಗಿ ಕಾಣುವ ರೀತಿಯಲ್ಲಿ ಮಾತನಾಡಿದ್ದಾರೆಂದು ಹೇಮನಾಥ ಶೆಟ್ಟಿಯವರು ಆರೋಪಿಸಿದ್ದಾರೆ.

ಬಂಟರ ಯಾನೆ ನಾಡವರ ಮಾತೃ ಸಂಘ (ದಿ) ಇದರ ಲೆಟರ್ ಹೆಡ್ ನಲ್ಲಿ ಹೇಮನಾಥ ಶೆಟ್ಟಿಯವರು ಪತ್ರ ಬರೆದಿದ್ದು ನಾಗೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಜ್ಞಾಪಿಸಿರುವ ಅವರು. ನೀವು ಕೈಗೊಂಡಿರುವ ಕ್ರಮದ ಬಗ್ಗೆ ನನ್ನ ಗಮನಕ್ಕೂ ತರಬೇಕೆಂದು ವಿನಂತಿಸಿಕೊಂಡಿದ್ದಾರೆ.

- Advertisement -

Related news

error: Content is protected !!