- Advertisement -
- Advertisement -
ಲಕ್ನೋ: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಆದರೆ ರಾಮಜನ್ಮಭೂಮಿ ಅರ್ಚಕರಿಗೆ ಕೊರೊನಾ ತಗುಲಿರುರುವುದು ದೃಢಪಟ್ಟಿದೆ. ಅರ್ಚಕರ ಜತೆ 16 ಮಂದಿ ಭದ್ರತಾ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಎಲ್ಲರ ಮನದಲ್ಲಿ ಆತಂಕ ಮೂಡಿದೆ.
ಅರ್ಚಕ ಪ್ರದೀಪ್ ದಾಸ್ ಎಂಬುವವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಇವರು ಸತ್ಯೇಂದ್ರದಾಸ್ ಅವರ ಶಿಷ್ಯರಾಗಿದ್ದಾರೆ ರಾಮಜನ್ಮಭೂಮಿಗೆ ಪ್ರತಿದಿನ ಪೂಜೆ ಸಲ್ಲಿಸುವ ನಾಲ್ವರು ಅರ್ಚಕರ ಪೈಕಿ ಇವರೂ ಒಬ್ಬರು.
ಸದ್ಯ ಪ್ರದೀಪ್ ದಾಸ್ ಅವರು ಹೋಂಕ್ವಾರಂಟೈನ್ ಒಳಗಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಇವರ ಸಂಪರ್ಕಕ್ಕೆ ಬಂದವರನ್ನು ಕೂಡ ಪತ್ತೆಹಚ್ಚಲಾಗಿದೆ ಎಂದು ತಿಳಿದುಬಂದಿದೆ.
- Advertisement -