Saturday, May 4, 2024
spot_imgspot_img
spot_imgspot_img

ಪುತ್ತೂರು: ರೈತರ ಜೈವಿಕ ಉತ್ಪಾದನಾ ಕಂಪೆನಿಯ ನೂತನ ಕಚೇರಿಯ ಉದ್ಘಾಟನೆ ಮತ್ತು ಮಾಹಿತಿ ಕಾರ್ಯಾಗಾರ

- Advertisement -G L Acharya panikkar
- Advertisement -

ಪುತ್ತೂರು ರೈತರ ಜೈವಿಕ ಉತ್ಪಾದನಾ ಕಂಪೆನಿ ನಿ. MEERA CLEANFUELS LIMITED (ಭಾರತ ಸರಕಾರದ ಅಧಿಕೃತ ಅನುಮತಿ ಹೊಂದಿದ ರೈತ ಉತ್ಪಾದಕ ಸಂಸ್ಥೆ) 1ನೇ ಮಹಡಿ, ಹಿಂದೂಸ್ತಾನ್ ಕಾಂಪ್ಲೆಕ್ಸ್, ಎ.ಪಿ.ಯಂ.ಸಿ. ರಸ್ತೆ, ಪುತ್ತೂರು, ದ. ಕ. ಇದರ ನೂತನ ಕಚೇರಿಯ ಉದ್ಘಾಟನೆ ಮತ್ತು ಜೈವಿಕ ಇಂಧನ ಉತ್ಪಾದನೆಯ ಬಗ್ಗೆ ಮಾಹಿತಿ ಕಾರ್ಯಾಗಾರ ದಿನಾಂಕ : 12-07-2022ನೇ ಮಂಗಳವಾರ ಸಂಜೆ ಗಂಟೆ 3-30 ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ನೂತನ ಕಚೇರಿಯ ಉದ್ಘಾಟನೆ ಮತ್ತು ಕಾರ್ಯಾಗಾರದ ಸಭಾಧ್ಯಕ್ಷತೆಯನ್ನು ಶಾಸಕ ಸಂಜೀವ ಮಠಂದೂರು ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಪುತ್ತೂರು ನಗರಸಭಾ ಅಧ್ಯಕ್ಷರಾದ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ತಹಶೀಲ್ದಾರ್ ನಿಸರ್ಗ ಪ್ರಿಯ, ಪೌರಾಯುಕ್ತರಾದ ಮಧು ಯಸ್. ಮನೋಹರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ಬಾಳ್ಯೊಟ್ಟು, ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಆಗಮಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಯಂ.ಸಿ.ಎಲ್ ಸೀನಿಯರ್ ಪ್ರೈಮ್ ಬಿಡಿಎ ಶ್ರವಣ್ ಮಾನೆ, ಉದಯ ಶೆಟ್ಟಿ ಬಿಸಿನೆಸ್ ಎಕ್ಸೆಸರ್ ಮಾನೆ ಗ್ರೂಪ್ ಯಂ.ಸಿ.ಎಲ್ ಮುಂಬೈ, ವಸಂತ ಎನ್.ಪೂಜಾರಿ ಸೀನಿಯರ್ ಬಿಡಿಎ ಯಂ.ಸಿ.ಎಲ್ ಬೆಳ್ತಂಗಡಿ ರವರು ಮಾಹಿತಿ ಕಾರ್ಯಗಾರದಲ್ಲಿ ಸಮಗ್ರ ಮಾಹಿತಿಯನ್ನು ಕೊಡಲಿದ್ದಾರೆ.

- Advertisement -

Related news

error: Content is protected !!