Monday, June 15, 2026
spot_imgspot_img
spot_imgspot_img

ಪುತ್ತೂರು: ರೈಲ್ವೇ ನಿಲ್ದಾಣದ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

- Advertisement -
- Advertisement -

ಪುತ್ತೂರು: ಅಪರಿಚಿತ ಮಹಿಳೆಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಬಕ – ಪುತ್ತೂರು ರೈಲ್ವೇ ನಿಲ್ದಾಣದ ಸಮೀಪ ಟ್ರ್ಯಾಕ್‌ನ ಬದಿಯಲ್ಲಿ ಪತ್ತೆಯಾಗಿದೆ.

ಶವ ಕೊಳೆತ ಸ್ಥಿತಿಯಲ್ಲಿದ್ದರಿಂದ ಗುರುತು ಪತ್ತೆಯಾಗಿಲ್ಲ. ಗೆಜ್ಜೆ, ಸೀರೆ ಮೇಲ್ನೊಟಕ್ಕೆ ಕಾಣಿಸುತ್ತಿದ್ದು, ತಲೆ ಭಾಗ ಯಾವುದೋ ಪ್ರಾಣಿ ತಿಂದಿರುವಂತೆ ಮತ್ತು ಹುಳವಾಗಿರುವುದರಿಂದ ಮುಖ ಗುರುತು ಸಿಗುತ್ತಿಲ್ಲ. ಇನ್ನು ಸುಮಾರು 35 ರಿಂದ 40 ವರ್ಷದ ಮಹಿಳೆ ಆಗಿರಬಹುದೆಂದು ಊಹಿಸಲಾಗಿದ್ದು, ಎರಡು ಮೂರು ದಿನದ ಹಿಂದೆಯೇ ಮಹಿಳೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸರು, ರೈಲ್ವೇ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!