Thursday, June 4, 2026
spot_imgspot_img
spot_imgspot_img

ಪುತ್ತೂರು:ರೈ ಎಸ್ಟೇಟ್‌ ಎಜ್ಯುಕೇಶನಲ್‌ & ಚಾರಿಟೇಬಲ್‌ ಟ್ರಸ್ಟ್‌ನ ಫಲಾನುಭವಿಗಳ ಸಮಾವೇಶದ ಪೂರ್ವಭಾವಿ ಸಭೆ; ಸಮಾವೇಶದಲ್ಲಿ 20ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ; ಜೊತೆಗೆ ದೀಪಾವಳಿಯ ವಸ್ತ್ರ ವಿತರಣೆ

- Advertisement -
- Advertisement -

ಪುತ್ತೂರು: ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಅಶೋಕ್ ಕುಮಾರ್ ರೈ ರವರ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ಅ.26 ರಂದು ಬೆಳಿಗ್ಗೆ 10 ಕ್ಕೆ ಸೀರೆ, ವಸ್ತ್ರ ವಿತರಣೆ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವರಗದ್ದೆಯ ಮೈದಾನದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಕಾರ್ಯಕ್ರಮದ ಪ್ರಥಮ ಸಮಾಲೋಚನಾ ರೈ ಎಸ್ಟೇಟ್‌ ಎಜ್ಯುಕೇಶನಲ್‌ ಎಂಡ್‌ ಚಾರಿಟೇಬಲ್‌ ಟ್ರಸ್ಟ್‌ನ ದರ್ಬೆಯ ಕಛೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಪ್ರವರ್ತಕರಾದ ಅಶೋಕ್ ಕುಮಾರ್ ಕೋಡಿಂಬಾಡಿಯವರು ಪ್ರಾಸ್ತವಿಕವಾಗಿ ಮಾತನಾಡಿ “ಟ್ರಸ್ಟ್‌ ನ ಮೂಲಕ ಸುಮಾರು 8558 ಜನರಿಗೆ ಬೇರೆ ಬೇರೆ ರೀತಿಯ ಸಹಕಾರ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ಮನೆ ನಿರ್ಮಾಣ ಮನೆ ದುರಸ್ತಿ, ದುರಸ್ತಿಗೆ ಬೇಕಾದ ಸಾಮಾಗ್ರಿ, ಅನಾರೋಗ್ಯ, ಮದುವೆ, ವಿದ್ಯಾಭ್ಯಾಸಕ್ಕೆ ಸಹಾಯಧನ, ಮಹಿಳೆಯರಿಗೆ ಟೈಲರಿಂಗ್ ತರಬೇತಿ ಮತ್ತು ಹೊಲಿಗೆ ಯಂತ್ರ, ವಾಹನ ಚಾಲನೆ ತರಬೇತಿ, ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗಿದೆ. ಇವರನ್ನು ಕರೆದು ಸಮಾವೇಶ ನಡೆಸಲಾಗುವುದು. ಇದರ ಜೊತೆಗೆ ವರ್ಷಂಪ್ರತಿ ಟ್ರಸ್ಟ್ ವತಿಯಿಂದ ನಡೆಸುವ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಿಸುವ ಕಾರ್ಯಕ್ರಮವನ್ನು ಅದೇ ದಿನ ಹಮ್ಮಿಕೊಳ್ಳಲಾಗಿದೆ. ಈ ವರ್ಷ ಸುಮಾರು 20000 ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇವರಿಗೆ ವ್ಯವಸ್ಥಿತವಾಗಿ ವಸ್ತ್ರ ಮತ್ತು ಊಟ ವಿತರಿಸುವ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ನಡೆಸುವ ಬಗ್ಗೆ ಮತ್ತು ತಯಾರಿ ಬಗ್ಗೆ ಚರ್ಚೆ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿದ ಪ್ರಮುಖರಿಂದ ಸಲಹೆಗಳನ್ನು ಸ್ವಿಕರಿಸಿ 10 ಸಮಿತಿಗಳನ್ನು ರಚನೆ ಮಾಡಿ ಸಮಿತಿಗೆ ಸಂಚಾಲಕರನ್ನು ಆಯ್ಕೆ ಮಾಡಿ ಸಮಿತಿಯ ಜವಾಬ್ದಾರಿ ನೀಡಲಾಯಿತು. ಮುಂದಿನ ಸಭೆಯಲ್ಲಿ ಪ್ರತಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯಿತು.

- Advertisement -

Related news

error: Content is protected !!