Monday, June 15, 2026
spot_imgspot_img
spot_imgspot_img

ಪುತ್ತೂರು: ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾರ್ಥಿನಿ ಕು.ದೀಕ್ಷಾ.ಎಸ್ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

- Advertisement -
- Advertisement -

ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪ ನಿರ್ದೇಶಕರ ಕಛೇರಿ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಪಂಜ ಇದರ ಸಹಯೋಗದಿಂದ ನವೆಂಬರ್ 18 ಮತ್ತು 19 ರಂದು ನಡೆದ ಮೈಸೂರು ವಿಭಾಗ ಮಟ್ಟದ 14ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆ ದರ್ಬೆಯ ಬಾಲಕಿಯರ ಕಬಡ್ಡಿ ತಂಡದ 8ನೇ ತರಗತಿಯ ವಿದ್ಯಾರ್ಥಿನಿ ಕು.ದೀಕ್ಷಾ ಎಸ್ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನವೆಂಬರ್ 21 ಮತ್ತು 22ರಂದು ನಡೆಯುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ಶಾಲಾಮುಖ್ಯ ಶಿಕ್ಷಕಿ ವೆನಿಶಾ ಬಿ.ಎಸ್‌ ಮಾರ್ಗದರ್ಶನದಲ್ಲಿ , ಶಾಲಾ ಸಹಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿರುತ್ತಾರೆ.

- Advertisement -

Related news

error: Content is protected !!