Thursday, April 25, 2024
spot_imgspot_img
spot_imgspot_img

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮ

- Advertisement -G L Acharya panikkar
- Advertisement -

ಪುತ್ತೂರು: ಯಾವುದೇ ಸಮಾಜ ಸೇವಕನೊಬ್ಬ ಸಮಾಜದ ಸಮಸ್ಯೆಯೊಂದನ್ನು ಗುರುತಿಸಿ, ಬಳಿಕ ತನ್ನ ಉದ್ಯಮಶೀಲ ತತ್ವಗಳನ್ನು ಬಳಸಿಕೊಂಡು ವಾಣಿಜ್ಯ ಉದ್ಯಮವೊಂದನ್ನು ಹುಟ್ಟುಹಾಕಿ, ವ್ಯವಸ್ಥಿತ ರೀತಿಯಲ್ಲಿ ಅದನ್ನು ಪೋಷಿಸುತ್ತ, ಬೆಳೆಸಿಕೊಂಡು ಹೋಗಬೇಕು.

ಆ ಮೂಲಕ ಸಮಾಜ ಮತ್ತು ಉದ್ಯಮ ಕ್ಷೇತ್ರಗಳೆರಡರಲ್ಲೂ ಒಂದು ಸಾಮಾಜಿಕ ಬದಲಾವಣೆಯನ್ನು ತರಬೇಕು ಎಂದು ಮಂಗಳ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರಂಜನ್ ಬೆಳ್ಳರ್ಪಾಡಿ ಹೇಳಿದರು.

ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ವೇದಿಕೆಯ ಮೂಲಕ ನಡೆದ ‘ಸಾಮಾಜಿಕ ಉದ್ಯಮಶೀಲತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ವ್ಯಾಪಾರೋದ್ಯಮಿಯೊಬ್ಬನು ಏನೇ ಮಾಡಿದರೂ ಅದು ತನ್ನ ಲಾಭದ ಮತ್ತು ತನಗೆ ಸಿಕ್ಕುವ ಆದಾಯದ ಕುರಿತೇ ಆಗಿರುತ್ತದೆ. ಆದರೆ ಸಮಾಜೋದ್ಯಮಿಯ ಮಾತು ಹಾಗಲ್ಲ.

ಒಬ್ಬ ಸಮಾಜೋದ್ಯಮಿಯ ಗುರಿ ಸಂಪೂರ್ಣವಾಗಿ ಸಮಾಜಕ್ಕೆ ದಕ್ಕುವ ಲಾಭದ ಕುರಿತೇ ಆಗಿರುತ್ತದೆ. ಹೀಗೆ ಸಮಾಜೋದ್ಯಮಿಯ ಅಥವಾ ಸಮಾಜಸೇವಕನೊಬ್ಬನ ಬಹುಮುಖ್ಯ ಮತ್ತು ಉದ್ದೇಶಿತ ಗುರಿಯೆಂದರೆ ಸಾಮಾಜಿಕ ಮತ್ತು ಪರಿಸರಾತ್ಮಕ ಬೆಳವಣಿಗೆಗೆ ಶ್ರಮಿಸುವುದೇ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಉಷಾ ಕರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಶ್ರೀವತ್ಸ ಸ್ವಾಗತಿಸಿ ಭಾಗ್ಯಶ್ರೀ ವಂದಿಸಿದರು.

driving

- Advertisement -

Related news

error: Content is protected !!