Sunday, June 14, 2026
spot_imgspot_img
spot_imgspot_img

ವಿಟ್ಲ: ಸರಕಾರಿ ಪ್ರೌಢಶಾಲೆಯಲ್ಲಿ ನೂತನ ತರಗತಿ ಹಾಗೂ ಲ್ಯಾಬ್‌ ಕೊಠಡಿ ಉದ್ಘಾಟನೆ; ಸರಕಾರ ಮಾಡಬೇಕಾದ ಕೆಲಸವನ್ನು ಮುತ್ತೂಟ್‌ ಫೈನಾನ್ಸ್‌ನವರು ಮಾಡಿದ್ದಾರೆ- ಶಾಸಕ ಅಶೋಕ್‌ ಕುಮಾರ್‌ ರೈ

- Advertisement -
- Advertisement -

ವಿಟ್ಲ: ಮುತ್ತೂಟ್ ಫೈನಾನ್ಸ್‌ನ ಲಾಭಾಂಶದಲ್ಲಿ ನಿರ್ಮಿಸಲಾದ ಸರಕಾರಿ ಪ್ರೌಢಶಾಲೆ(RMSA)ವಿಟ್ಲ ಇಲ್ಲಿನ ನೂತನ ತರಗತಿ ಹಾಗೂ ಲ್ಯಾಬ್‌ ಕೊಠಡಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ನೂತನ ತರಗತಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ” ಲಾಭಾಂಶದಲ್ಲಿ‌ ಮುತ್ತೂಟು ಫೈನಾನ್ಸ್ ನಿಂದ ಸರಕಾರಿ ಶಾಲೆಯಲ್ಲಿ ಕೊಠಡಿ ನಿರ್ಮಾಣ‌ ಮಾಡಿದ್ದಾರೆ. ಸರಕಾರ ಮಾಡಬೇಕಾದ ಕೆಲಸವನ್ನು ಮುತ್ತೂಟ್‌ನವರು ಮಾಡಿದ್ದಾರೆ. ವಿಟ್ಲದಲ್ಲಿ‌ಖಾಸಗಿ ಶಾಲೆ ಇದ್ದರೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಶ್ಲಾಘನೀಯವಾಗಿದೆ. 1500 ಮಕ್ಕಳಿರುವ ವಿಟ್ಲ ಸರಕಾರಿ ಪ್ರೌಢ ಶಾಲೆ ಗ್ರೇಟ್.ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಕನ್ನಡದ ಜೊತೆಗೆ ಇಂಗ್ಲೀಷ್ ಭಾಷೆ ಕಡ್ಡಾಯಗೊಳಿಸಬೇಕು ಹಾಗೂ ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು. ಶಾಲೆ ಅಭಿವೃದ್ದಿಗೆ ಪೂರ್ಣ ಸಹಕಾರ ನೀಡುತ್ತೇನೆ.ಇಲ್ಲಿಗೆ ಹೆಚ್ಚಿನ ಶಿಕ್ಷಕರ ನೇಮಕ ಮಾಡಲಾಗುವುದು ಭರವಸೆ ನೀಡಿದರು.

- Advertisement -

Related news

error: Content is protected !!