Saturday, June 6, 2026
spot_imgspot_img
spot_imgspot_img

ಪುತ್ತೂರು: ಸರಕಾರಿ ಶಾಲೆಗೆ ಕನ್ನ ಹಾಕಿದ ಖದೀಮರು; ಬೀಗ ಮುರಿದು 16 ಬ್ಯಾಟರಿ ಕಳವು

- Advertisement -
- Advertisement -
vtv vitla

ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯ ಯುಪಿಯಸ್‌ನ ಹಳೆಯ ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಶಾಂತಿನಗರ ಸರಕಾರಿ ಪ್ರೌಢಶಾಲೆಯ ಒಂದನೇ ಅಂತಸ್ತಿನಲ್ಲಿರುವ ಕಂಪ್ಯೂಟರ್ ಕೊಠಡಿಯಲ್ಲಿ ಇರಿಸಲಾಗಿದ್ದ ಕಂಪ್ಯೂಟರಿನ ಹಳೆಯ 16 ಬ್ಯಾಟರಿಗಳನ್ನು ಕಳವು ಮಾಡಲಾಗಿದೆ ಎಂದು ಮುಖ್ಯೋಪಾಧ್ಯಾಯ ವಿಷ್ಣುಪ್ರಸಾದ್‌ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಾ.9ರಂದು ಶಾಲಾ ಅವಧಿಯ ನಂತರ ಕೊಠಡಿಯ ಬೀಗ ಮುರಿದು ಬ್ಯಾಟರಿಗಳನ್ನು ಕಳವು ಮಾಡಲಾಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಪ್ರೌಢಶಾಲೆಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!