Thursday, May 2, 2024
spot_imgspot_img
spot_imgspot_img

ಪುತ್ತೂರು: 20 ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದಿದ್ದ ಮರ್ಡರ್ ಕೇಸ್; ಕೋಡಿಂಬಾಡಿ ವಿಶ್ವನಾಥ.ಶೆಟ್ಟಿ ಅಪರಾಧ ಸಾಬೀತು.!

- Advertisement -G L Acharya panikkar
- Advertisement -

vtv vitla
vtv vitla

ಪುತ್ತೂರು: ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಪುತ್ತೂರು ಸೂತ್ರಬೆಟ್ಟುವಿನ ವಿಶ್ವನಾಥ.ರೈಯವರನ್ನು ೨೦ ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ಕೊಲೆ ಮಾಡಿದ್ದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಕೋಡಿಂಬಾಡಿಯ ಅಂತರ ನಿವಾಸಿ ವಿಶ್ವನಾಥ ಶೆಟ್ಟಿ ಯಾನೆ ಪಂಚಮಿ ವಿಶ್ವ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಮಾನಿಸಿದ್ದು ಅಪರಾಧಿಗೆ ಶಿಕ್ಷೆಯ ಪ್ರಮಾಣ ಇಂದು (ದ.೧೫) ಪ್ರಕಟವಾಗಲಿದೆ.

2001ರ ಜೂನ್ 7ರಂದು ರಾತ್ರಿ ವೇಳೆ ಫೈನಾನ್ಸ್ ಉದ್ಯಮಿ ಬಡ್ಡಿ ವಿಶ್ವ ಯಾನೆ ಸೂತ್ರ ಬೆಟ್ಟು ವಿಶ್ವನಾಥ ರೈಯವರ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ನಡೆಸಲಾಗಿತ್ತು .ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿ ಕೋಡಿಂಬಾಡಿ ವಿಶ್ವ ನಾಥ ಶೆಟ್ಟಿ ಯವರನ್ನು ೧೩ ವರ್ಷಗಳ ಬಳಿಕ ಪೊಲೀಸರು ತಮಿಳ್ನಾಡಿನಲ್ಲಿ ಪತ್ತೆ ಮಾಡಿ ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೆಲ ಸಮಯದ ಬಳಿಕ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆ ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಆರೋಪಿ ವಿಶ್ವನಾಥ ಶೆಟ್ಟಿ ಯವರನ್ನು ತಮಿಳ್ನಾ ಡಲ್ಲಿ ಬಂಧಿಸಿನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದ ಸಂದರ್ಭ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿ ವಿಶ್ವನಾಥ ಶೆಟ್ಟಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಪ್ರ ಕಟಿಸಿದೆ. ಈ ಸಂದರ್ಭ ಅಪರಾಧಿ ನ್ಯಾಯಾಲಯದಲ್ಲಿ ಹಾಜರಿದ್ದರು. ವಿಶ್ವನಾಥ ರೈಯವರನ್ನು ಕೊಲೆ ಮಾಡಿರುವುದು, ಸಾಕ್ಷಿ ನಾಶ ಮಾಡಿರುವುದು ಹಾಗೂ ಕೊಲೆ ಬೆದರಿಕೆಯೊಡ್ಡಿದ್ದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಶಿಕ್ಷೆಯ ಪ್ರಮಾಣ ದ.೧೫ರಂದು ಪ್ರಕಟವಾಗಲಿದೆ.

vtv vitla

- Advertisement -

Related news

error: Content is protected !!