Saturday, June 20, 2026
spot_imgspot_img
spot_imgspot_img

ಬಂಟ್ವಾಳ : ವಿವಾಹಿತ ಮಹಿಳೆ ನಾಪತ್ತೆ..!

- Advertisement -
- Advertisement -

ಬಂಟ್ವಾಳ : ಟೈಲರ್ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ವಿವಾಹಿತ ಮಹಿಳೆಯೋರ್ವಳು ಕಳೆದ ಮೇ ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ ಎಂದು ಮನೆಯವರು ತಡವಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಬಿ.ಮೂಡ ಗ್ರಾಮದ ಮುಗ್ದಲ್ ಗುಡ್ಡೆ ನಿವಾಸಿ ವಾಣಿಶ್ರೀ (40) ನಾಪತ್ತೆಯಾದ ಮಹಿಳೆ. ವಾಣಿಶ್ರೀ ಅವರನ್ನು ಕಳೆದ 10 ವರ್ಷದ ಹಿಂದೆ ವೇಣೂರಿನ ಯೋಗೀಶ್ ಎಂಬಾತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಆ ಬಳಿಕ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ಬಂಟ್ವಾಳದ ತಾಯಿ ಮನೆಯಲ್ಲಿ ವಾಸವಾಗಿದ್ದಳು. ಮೇ 21ರಂದು ವಾಣಿಶ್ರೀ ಅವರು ಹಳೆಯಂಗಡಿಯ ಪರಿಚಿತ ವ್ಯಕ್ತಿ ವರುಣ್ ಎಂಬಾತನ ಜೊತೆ ಹೋಗಿದ್ದಳು. ಆದರೆ ಮರುದಿನ ಮಂಗಳೂರಿನಿಂದ ಮಗಳನ್ನು ಕರೆದುಕೊಂಡು ಬರಲಾಗಿತ್ತು.

ಈ ಘಟನೆ ನಡೆದು ನಾಲ್ಕು ದಿನದ ಬಳಿಕ ಟೈಲರ್ ಅಂಗಡಿಗೆ ಹೋಗಿ‌ಬರುತ್ತೇನೆ ಎಂದು ಮನೆಯಲ್ಲಿ ಧರಿಸಿದ ಬಟ್ಟೆಯಲ್ಲಿ ಹೋದವಳು ವಾಪಾಸು ಮನೆಗೆ ಬಂದಿಲ್ಲ ಎಂದು ಬಂಟ್ವಾಳ ‌ನಗರ ಪೊಲೀಸ್ ಠಾಣೆಗೆ ಈಕೆಯ ತಾಯಿ ಸುನಂದಾ ಅವರು ದೂರು ನೀಡಿದ್ದಾರೆ. ಟೈಲರ್ ಅಂಗಡಿಯಲ್ಲಿ ವಿಚಾರಿಸಿದಾಗ ಅಲ್ಲಿಗೂ ಬರದೆ ನಾಪತ್ತೆಯಾಗಿದ್ದು ಈಕೆ ಮತ್ತೆ ಹಳೆಯಂಗಡಿಯ ವರುಣ್ ಜೊತೆಗೆ ಹೋಗಿರುಬಹುದು ಎಂದು ತಾಯಿ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಗಳನ್ನು ಹುಡುಕಿಕೊಡಿ ಎಂದು ಬಂಟ್ವಾಳ ‌ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!