Sunday, June 14, 2026
spot_imgspot_img
spot_imgspot_img

ಮಂಗಳೂರು: ಆನ್‌ಲೈನ್‌ನಲ್ಲಿ ಖರೀದಿಸಿದ ಆಹಾರ ತಿಂದು ಕಾಸರಗೋಡು ಮೂಲದ ವಿದ್ಯಾರ್ಥಿನಿ ಮೃತ್ಯು

- Advertisement -
- Advertisement -

ಕಾಸರಗೋಡು: ಆನ್‌ಲೈನ್ ಮೂಲಕ ಖರೀದಿಸಿದ ಆಹಾರ ಸೇವಿಸಿ ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು, ತಲಕ್ಲಾಯಿ ನಿವಾಸಿ ಅಂಜುಶ್ರೀ ಪಾರ್ವತಿ(19) ಮೃತಪಟ್ಟ ವಿದ್ಯಾರ್ಥಿನಿ. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಈಕೆ ಅಸುನೀಗಿದ್ದಾಳೆ.

ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದ ಅಂಜುಶ್ರೀ ಕ್ರಿಸ್ ಮಸ್ ರಜೆಯಂದು ಮನೆಗೆ ಬಂದಿದ್ದಳು. ಈ ವೇಳೆ ಕಾಸರಗೋಡಿನ ರಮೆನ್ಸಿಯಾ ಹೋಟೆಲ್ ಒಂದರಿಂದ ಆನ್‌ಲೈನ್ ಮೂಲಕ ಆಹಾರ ಖರೀದಿಸಿದ್ದು ಅದನ್ನು ಸೇವಿಸಿದ ಕೂಡಲೇ ಅಸೌಖ್ಯ ಕಾಣಿಸಿಕೊಂಡಿದೆ. ಕೂಡಲೇ ಕಾಸರಗೋಡು ಆಸ್ಪತ್ರೆಗೂ ಅನಂತರ ಮಂಗಳೂರು ಆಸ್ಪತ್ರೆಗೂ ಕೊಂಡೊಯ್ಯಲಾಯಿತು.

ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಆಕೆ ಕೊನೆಯುಸಿರೆಳೆದಳು. ಈ ಬಗ್ಗೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ. ದಿವಂಗತ ಕುಮಾರನ್ ನಾಯರ್- ಅಂಬಿಕಾ ದಂಪತಿಯ ಪುತ್ರಿಯಾದ ಅಂಜುಶ್ರೀಯ ಸಹೋದರ ಶ್ರೀಕುಮಾರ್ ಮಂಗಳೂರು ಕಾಲೇಜು ವಿದ್ಯಾರ್ಥಿಯಾಗಿದ್ದಾನೆ.

- Advertisement -

Related news

error: Content is protected !!