Thursday, April 25, 2024
spot_imgspot_img
spot_imgspot_img

ಪುತ್ತೂರು: 30ನೇ ವರ್ಷದ ಕಂಬಳದಲ್ಲಿ ಮೂರು ಗಲಭೆ: ಹಿಂದೂ ಯುವತಿಯ ಫೋಟೋ ಕ್ಲಿಕ್ಕಿಸಿದ ಮುಸ್ಲಿಂ ಯುವಕ..! ಮೂಕರಾದ ಕಂಬಳ ಸಮಿತಿ – ಸಾರ್ವಜನಿಕರಿಂದ ಛೀಮಾರಿ

- Advertisement -G L Acharya panikkar
- Advertisement -

ಪುತ್ತೂರು: ಕರಾವಳಿಯಲ್ಲಿಯೇ ಸುಪ್ರಸಿದ್ಧ ಕಂಬಳ ಎಂಬ ಖ್ಯಾತಿ ಪಡೆದಿದ್ದ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಈ ಬಾರಿ ಕಪ್ಪು ಚುಕ್ಕೆಗಳು ಅಂಟಿಕೊಂಡಿದೆ. ಹಲವಾರು ವರ್ಷಗಳ ಕಾಲ ಶಾಂತಿಯಿಂದ ನಡೆದ ಕಂಬಳದಲ್ಲಿ ಈಗ ಗಲಭೆಗಳೇ ಜಾಸ್ತಿಯಾಗುತ್ತಿದೆ. ಇದರಿಂದ ಕಂಬಳಕ್ಕೆ ಬರುವ ಸಹಸ್ರಾರು ಅಭಿಮಾನಿಗಳಿಗೆ ಆತಂಕದ ಛಾಯೆ ಮೂಡಿದೆ. 30ನೇ ವರ್ಷದ ಕಂಬಳದಲ್ಲಿ ನಡೆದ ಮೂರು ಘಟನೆಗಳು ನಿಜಕ್ಕೂ ಆತಂಕ ಸೃಷ್ಟಿಸಿದೆ.

ಹಿಂದೂ ಯುವತಿಯ ಫೋಟೋ ತೆಗೆದ ಮುಸ್ಲಿಂ ಯುವಕ
ಕಂಬಳ ಗದ್ದೆಯಲ್ಲಿ ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯ ಫೋಟೋ ತೆಗೆದಿದ್ದಾನೆ. ಈ ವಿಚಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ. ಕುರಿಯ ಮೂಲದ ಮುಸ್ಲಿಂ ಯುವಕ ಎನ್ನಲಾಗಿದೆ.

ಮೊಬೈಲ್ ಪರಿಶೀಲನೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಮುಸ್ಲಿಂ ಯುವಕನ ಮೊಬೈಲ್ ಫೋನ್ ತಪಾಸಣೆ ನಡೆಸಿದಾಗ ಸ್ಪೋಟಕ ಮಾಹಿತಿ ತಿಳಿದುಬಂದಿದೆ. ಠಾಣೆಯಲ್ಲಿ ಯುವಕನ ಮೊಬೈಲ್ ಪರಿಶೀಲನೆ ನಡೆಸಿದಾಗ ಹಲವು ಯುವತಿಯರ ಫೋಟೋಗಳು ಮೊಬೈಲ್ ನಲ್ಲಿ ಇರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ, ಯುವಕನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಠಾಣೆಯಿಂದ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಸಾನ್ಯಾ ಅಯ್ಯರ್‌ ಜೊತೆ ಅನುಚಿತ ವರ್ತನೆ ತೋರಿಸಿದ ಮುಸ್ಲಿಂ ಪುಂಡ..! ಸಾರ್ವಜನಿಕರಿಂದ ಧರ್ಮದೇಟು
ಕಂಬಳ ಕೂಟಕ್ಕೆ ಸಾನಿಯಾ ಅತಿಥಿಯಾಗಿ ಆಗಮಿಸಿದ್ದರು. ಪುತ್ತೂರು ಜನರನ್ನು ಪ್ರೀತಿಯಿಂದಲೇ ‘ಐ ಲವ್ ಯೂ ಪುತ್ತೂರು” ಎಂದು ಘೋಷಣೆಯೊಂದಿಗೆ ಮಾತುಗಳನ್ನು ಆಡಿದ್ದರು. ಸಾನಿಯಾ ‘ಐ ಲವ್ ಯೂ ಪುತ್ತೂರು’ ಎಂದು ಭಾಷಣ ಮಾಡುತ್ತಿದ್ದಂತೆಯೇ ಅಲ್ಲಿಯೇ ಕುಳಿತಿದ್ದ ಅಭಿಮಾನಿ ‘ಐ ಲವ್ ಯೂ ಸಾನಿಯಾ” ಎಂದು ಪ್ರತಿಯಾಗಿ ಕೂಗಿದ್ದಾನೆ. ಐದಾರು ಬಾರಿ ಈ ರೀತಿ ಆಗಾಗ್ಗೆ ಹೇಳಿದ್ದಾನೆ.

ಸಾನಿಯಾ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಅಭಿಮಾನಿ ಎಂದು ಹತ್ತಿರ ಬಂದಿದ್ದಾನೆ. ತನ್ನೊಂದಿಗೆ ಒಂದಿಷ್ಟು ಪುಂಡರನ್ನು ಕಟ್ಟಿಕೊಂಡು ಬಂದ ಅನ್ಯಮತೀಯ ಯುವಕ ಸೆಲ್ಪಿ ನೆಪದಲ್ಲಿ ಸಾನಿಯಾರ ಕೈ ಹಿಡಿದಿದ್ದಾನೆ ಹಾಗೂ ಸಾನಿಯಾಳ ಸ್ನೇಹಿತೆ ಒಬ್ಬಳನ್ನು ಚುಡಾಯಿಸುವ ಪ್ರಯತ್ನ ಮಾಡಿದ್ದಾನೆ.

ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವಕನ ಮೇಲೆ ಹಲ್ಲೆ ನಡೆಸಿದ ಗ್ಯಾಂಗ್..!
ಇನ್ನು ಮತ್ತೊಂದು ಪ್ರಕರಣ ಕೂಡ ಆತಂಕ ನಿರ್ಮಿಸಿದೆ. ಕಂಬಳ ವೀಕ್ಷಣೆಗೆ ಬಂದಿದ್ದ ಮಂಗಳೂರಿನ ಯುವಕ ತನ್ನ ಪ್ರೇಯಸಿಯ ಜೊತೆ ಕಂಬಳ ಗದ್ದೆಯಲ್ಲಿ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಯುವತಿಯ ಮಾಜಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಮಂಗಳೂರಿನ ಯುವಕನಿಗೆ ಬೆದರಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಮಂಗಳೂರಿನ ಯುವಕನನ್ನು ಮಂಗಳೂರಿನ ಕೋಡಿಕಲ್‌ ರಸ್ತೆ ಬಾಪೂಜಿ ನಗರದ ಸಾಗರ್‌ (23) ಮತ್ತು ಆತನ ಸ್ನೇಹಿತ ದುರ್ಗಾಪ್ರಸಾದ್‌ ಹಲ್ಲೆಗೊಳಗಾದವರು.ಕೌಶಿಕ್‌, ಯಜ್ಞೇಶ್‌, ಕೇಶವ, ಸೃಜನ್‌, ವಿನೀತ್‌, ಲತೇಶ್‌, ಮನ್ವಿತ್‌, ಮೋಹಿತ್‌ ಮತ್ತು ಹೇಮಂತ್‌ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ದಿ. ಜಯಂತ್‌ ರೈ ಮತ್ತು ದಿ. ಮುತ್ತಪ್ಪ ರೈ ಸಾರಥ್ಯದಲ್ಲಿ ನಡೆಯುತ್ತಿದ್ದ ಕಂಬಳ
ದಿ. ಜಯಂತ್‌ ರೈ ಮತ್ತು ದಿ. ಮುತ್ತಪ್ಪ ರೈ ಇವರ ಸಾರಥ್ಯದಲ್ಲಿ ನಡೆಯುತ್ತಿದ್ದ ಕಂಬಳದಲ್ಲಿ ಇದುವರೆಗೂ ಒಂದು ಕಪ್ಪು ಚುಕ್ಕೆ ಬಂದಿರಲಿಲ್ಲ. ಆದರೆ ಇದೀಗ ಕಂಬಳ ಸಮಿತಿಯಲ್ಲಿ ಕೆಲವು ವರ್ಷಗಳಿಂದ ಒಳಜಗಳ ಉಂಟಾಗಿದೆ. ಕಂಬಳ ಸಮಿತಿಯ ಅದ್ಯಕ್ಷರ ಮತ್ತು ಸದಸ್ಯರ ಆಡಳಿತ ವೈಫಲ್ಯವೇ ಇಂತಹ ಗಲಭೆಗಳಿಗೆ ನೇರ ಹೊಣೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ.

ದಿ. ಮುತ್ತಪ್ಪ ರೈ ನೇತೃತ್ವದಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ಬೆಂಗಳೂರು ಸೇರಿಂದತೆ ನಾನಾ ರಾಜ್ಯಗಳಿಂದ ಸಾವಿರಾರೂ ಮಂದಿ ಬಂದು ಕರಾವಳಿ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದರು. ಅನೇಕ ಸಿನೆಮಾ ನಟ ನಟಿಯರು, ರಾಜಕೀಯ ಮುಖಂಡರು ಬಂದು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.

ಮೂಕರಾದ ಕಂಬಳ ಸಮಿತಿ – ಸಾರ್ವಜನಿಕರಿಂದ ಛೀಮಾರಿ
ಇನ್ನು ಇಂತಹ ಘಟನೆಗಳು ಸಾರ್ವಜನಿಕ ವಲಯದಲ್ಲಿ ಆತಂಕ ನಿರ್ಮಾಣ ಮಾಡಿದೆ. ಆಡಳಿತ ಸಮಿತಿಯ ವೈಫಲ್ಯ ಎದ್ದು ಕಾಣುತ್ತಿದೆ. ಕರ್ನಾಟಕದಾದ್ಯಂತ ಖ್ಯಾತಿ ಪಡೆದ ಸಾನ್ಯಾ ಅಯ್ಯರ್ ಅವರ ಜೊತೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಪುಂಡರ ಪರವಾಗಿ ವ್ಯವಸ್ಥಾಪಾನ ಸಮಿತಿ ನಿಂತಿದೆಯಾ ಎಂಬ ಮಾತುಗಳು ಕೇಳಿ ಬರುತ್ತಿದೆ.

ಚಂದ್ರಹಾಸ್ ಶೆಟ್ಟಿ ಹಾಗೂ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ನೇತೃತ್ವದಲ್ಲಿ ನಡೆದ ಈ ಕಂಬಳದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದಾಗಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ಈ ಮೊದಲೇ ಆಯೋಜಕರಲ್ಲಿ ಮತ್ತು ವ್ಯವಸ್ಥಾಪನ ಸಮಿತಿಯ ಬಳಿ ಅನ್ಯಮತೀಯರಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿತ್ತು ಎನ್ನಲಾಗಿದೆ. ಇಂತಹ ಘಟನೆಗಳಿಂದ ಕಂಬಳದ ಘನತೆಗೆ ಧಕ್ಕೆ ಆಗಲಿದೆ. ಈ ಬಗ್ಗೆ ಕಂಬಳ ಸಮಿತಿ ತೋರಿದ ದಡ್ಡತನಕ್ಕೆ ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ.

- Advertisement -

Related news

error: Content is protected !!