Friday, April 26, 2024
spot_imgspot_img
spot_imgspot_img

ಪುತ್ತೂರು KSRTC ಅಧಿಕಾರಿಗಳಿಂದ ಕುಡುಕರಿಗೆ ಬಂಪರ್ ಆಫರ್.!?? ಕುಡುಕನ ಎದೆಗೆ ತುಳಿದ ನಿರ್ವಾಹಕ ಅಮಾನತು; ಕುಡುಕನಿಗೆ 5000 .!?

- Advertisement -G L Acharya panikkar
- Advertisement -
astr

ಪುತ್ತೂರು: KSTRC ಬಸ್ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ತುಳಿದು ರಸ್ತೆಗೆ ದೂಡಿ ಹಾಕಿದ ಅಮಾನವೀಯ ಕೃತ್ಯ ಈಶ್ವರಮಂಗಲದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರಿ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈದೀಗ ಪುತ್ತೂರಿನ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಈ ನಿರ್ಧಾರ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಪುತ್ತೂರಿನ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕುಡುಕ ಪ್ರಯಾಣಿಕನಾಗಿದ್ದ ಈಶ್ವರಮಂಗಲದ ಕೃಷ್ಣಪ್ಪ ಎಂಬವರ ಮನೆಗೆ ತೆರಳಿ ಆತನಿಗೆ ಆರ್ಥಿಕ ಪರಿಹಾರ ನೀಡಿದ್ದಾರೆ. ಇದು ಕುಡುಕರಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಪುತ್ತೂರು ಸಾರಿಗೆ ಸಂಸ್ಥೆಯ ಅಧಿಕಾರಿಗಳ ಈ ಒಂದು ನಿರ್ಧಾರ ಸರಿಯಲ್ಲ ಎಂಬಂತೆ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯಲ್ಲಿ ಕುಡುಕ ಪ್ರಯಾಣಿಕರಾಗಿದ್ದಈಶ್ವರಮಂಗಲದ ಕೃಷ್ಣಪ್ಪ ಅವರು ಸ್ಥಳೀಯ ಠಾಣೆಗೆ ಬಂದು “ತಾನೂ ಕುಡಿತ ಅಮಲಿನಲ್ಲಿ ಇದ್ದದೂ ನಿಜ.. ನನ್ನಿಂದ ತಪ್ಪಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.

KSTRC ಮಜ್ದೂರು ಸಂಘ ಪುತ್ತೂರು ವಿಭಾಗದ ವಕ್ತಾರ ಶಾಂತಾರಾಮ್ ವಿಟ್ಲ ಖಂಡನೆ!!

ಪ್ರಯಾಣಿಕರಿಗೆ ತೊಂದರೆ ಮಾಡುವಂತ ನಿರ್ವಾಹಕರಿಗೆ ತಕ್ಕ ಪಾಠ ಕಲಿಸುವುದು ಸಾರಿಗೆ ಸಂಸ್ಥೆಯ ಕರ್ತವ್ಯವಾಗಿದ್ದು, “ಈಶ್ವರಮಂಗಲ ಘಟನೆಗೆ ಸಂಬಂಧಿಸಿ ನಿರ್ವಾಹಕನನ್ನು ಸೇವೆಯಿಂದ ಅಮಾನತುಗೊಳಿಸಿದ್ದು ಸಾರಿಗೆ ಸಂಸ್ಥೆಯ ಶ್ಲಾಘನೀಯ ಕಾರ್ಯ. ಆದರೆ ಪುತ್ತೂರು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕುಡುಕನ ಮನೆಗೆ ತೆರಳಿ ಆತನಿಗೆ ಆರ್ಥಿಕ ಪರಿಹಾರ ನೀಡಿರುವುದು ಇಂತಹ ಘಟನೆಗಳಿಗೆ ಮತ್ತೆ ಆಹ್ವಾನ ನೀಡಿದಂತಾಗಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳ ಈ ನಿರ್ಧಾರ ಸರಿಯಲ್ಲ ಇದು ಖಂಡನೀಯ” ಎಂದು KSTRC ಮಜ್ದೂರು ಸಂಘ ಪುತ್ತೂರು ವಿಭಾಗದ ವಕ್ತಾರ ಶಾಂತಾರಾಮ್ ವಿಟ್ಲ ಖಂಡಿಸಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ಮಾಧ್ಯಮ ಪ್ರತಿನಿಧಿ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಗೌರಮ್ಮ ಅವರು ಇದರ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ನಂತರ PRO ಲತಾ ಅವರನ್ನು ಸಂಪರ್ಕಿಸಿದಾಗ “ಅಧಿಕಾರಿಗಳು ಕೃಷ್ಣಪ್ಪ ಅವರನ್ನು ಸಂಪರ್ಕಿಸಿದ್ದು, ಅವರ ಮನೆಗೆ ತೆರಳಿದಾಗ ಅವರು ಇರಲಿಲ್ಲ” ಎಂದು ಮಾಹಿತಿನೀಡಿದ್ದಾರೆ. ಏನೇ ಆದರೂ ಪುತ್ತೂರು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಘಟನೆಗೆ ಸಂಬಂಧಪಟ್ಟಂತೆ ಬಸ್ ನಿರ್ವಾಹಕನನ್ನು ಸೇವೆಯಿಂದ ಅಮಾನತುಗೊಳಿಸಿದ್ದು ದಿಟ್ಟ ನಿರ್ಧಾರವಾದರೂ, ಕುಡುಕನ ಮನೆಗೆ ತೆರಳಿ ಆತನಿಗೆ ಹಣ ನೀಡುವ ನಿರ್ಧಾರ ಸರಿಯಲ್ಲ ಇದು ಇನ್ನಷ್ಟು ನಿರ್ವಾಹಕರ ಜೊತೆ ಜಗಳಮಾಡುವಂತೆ ಪ್ರೋತ್ಸಾಹ ನೀಡಿದಂತಿದೆ.

ಇದನ್ನೂ ಓದಿ:: ಪುತ್ತೂರು: KSTRC ಬಸ್ ನಿರ್ವಾಹಕನ ಅಮಾನವೀಯ ಕೃತ್ಯ..! – ನಿರ್ವಾಹಕ ಸಸ್ಪೆಂಡ್ ಪ್ರಯಾಣಿಕನ ಎದೆಗೆ ತುಳಿದು ರಸ್ತೆಗೆ ತಳ್ಳಿದ ವೀಡಿಯೋ ವೈರಲ್

- Advertisement -

Related news

error: Content is protected !!