Tuesday, June 9, 2026
spot_imgspot_img
spot_imgspot_img

ಗಾಂಜಾ ಮಾರಾಟ; ನಾಲ್ವರು ಗಾಂಜಾ ಪೆಡ್ಲರ್‌ಗಳು ಅರೆಸ್ಟ್..!

- Advertisement -
- Advertisement -

ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ನಾಲ್ವರು ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿದ ಘಟನೆ ಮಣಿಪಾಲದ ಶೀಂಬ್ರಾ ಬ್ರಿಡ್ಜ್ ಬಳಿ ನಡೆದಿದೆ.

ಸಾಸ್ತಾನದ ಅಬ್ದುಲ್ ಲತೀಫ್(32), ಮೊಹಮ್ಮದ್ ಅಶ್ಪಕ್, ಕೋಟೇಶ್ವರದ ಮುಸ್ತಾಫ್ ಹಂಜಾ ಬ್ಯಾಲಿ (35) ಹಾಗೂ ಉಪ್ಪೂರಿನ ಶಕಿಲೇಶ (25) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 274 ಗ್ರಾಂ ಗಾಂಜಾ, 5 ಲಕ್ಷ ರೂ. ಮೌಲ್ಯದ ಕಾರು, 19130 ನಗದು ಸಹಿತ 5 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾವನ್ನು ಮಣಿಪಾಲದಲ್ಲಿ ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಗಾಂಜಾವನ್ನು ಸದರಿ ನಾಲ್ಕು ಜನ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.

ಮಣಿಪಾಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಇದಕ್ಕಾಗಿ ಹಲವಾರು ವಿದ್ಯಾರ್ಥಿಗಳನ್ನು ಮಾರಾಟಕ್ಕೆ ಬಳಸಿಕೊಂಡಿರುವುದು ಹಾಗೂ ಸೇವನೆ ಮಾಡಿರುವುದು ತಿಳಿದು ಬಂದಿದ್ದು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಚರಣೆಯಲ್ಲಿ ಮಣಿಪಾಲ ಠಾಣೆಯ ಎಎಸ್‌ಐ ವಿವೇಕಾನಂದ, ಅಬ್ದುಲ್ ರಜಾಕ್, ಸುಕುಮಾರ ಶೆಟ್ಟಿ, ಪ್ರಸನ್ನ, ಅರುಣ ಕುಮಾರ್, ಚನ್ನೇಶ್, ಮಂಜುನಾಥ ಪಾಲ್ಗೊಂಡಿದ್ದರು.

- Advertisement -

Related news

error: Content is protected !!