- Advertisement -
- Advertisement -


ಪುತ್ತೂರು : ಬೆಳ್ಳಾರೆಯ ಎಸ್.ಡಿ.ಪಿ.ಐ ಕಾರ್ಯಕರ್ತರು ಮಸೀದಿಗೆ ನುಗ್ಗಿ ಬೆಳ್ಳಾರೆ ಯೂನಿಟ್ ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ಅಝರ್ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳ್ಳಾರೆಯಲ್ಲಿ ಅಕ್ಟೋಬರ್ 20ರಂದು ಸಂಜೆ ನಡೆದಿದೆ.
ಆಝರ್ ಮಸೀದಿಯಲ್ಲಿ ನಡೆಯುವ ಚುನಾವಣೆಗಾಗಿ ಮತದಾರರ ಪಟ್ಟಿಯನ್ನು ಸಿದ್ಧತೆ ಮಾಡಿ ಮಸೀದಿಗೆ ಕೊಂಡೊಯ್ಯುವ ವೇಳೆ ಅಲ್ಲಿಗೆ ಆಗಮಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರಾದ ಹಾಶಿರ್, ಹೈದರ್, ಹಾರಿಸ್, ಮುನೀರ್, ಹಮೀದ್ ಎಂಬವರು ದೊಣ್ಣೆ, ಬ್ಲೇಡ್ ಹಾಗೂ ರಾಡಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ಅಝರ್ ಮಸೀದಿಯಲ್ಲಿ ಕುಸಿದು ಬಿದ್ದಿದ್ದು, ಸ್ಥಳೀಯರು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಸಿದ್ದರು. ಗಾಯಾಳುವಿನ ಕಾಲು, ಬೆನ್ನಿನ ಭಾಗ ಹಾಗೂ ತಲೆಯ ಭಾಗಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಬೆಳ್ಳಾರೆ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಘಟನೆಯ ವಿರುದ್ಧ ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.


- Advertisement -








