Tuesday, June 9, 2026
spot_imgspot_img
spot_imgspot_img

“ಪುಷ್ಪಾ, ಪುಷ್ಪ ರಾಜ್, ನಾನು ಉತ್ತರ ಬರೆಯಲ್ಲ” SSLC ಎಕ್ಸಾಂನಲ್ಲಿ ಸಿನೆಮಾ ಡೈಲಾಗ್ ಬರೆದ ವಿಧ್ಯಾರ್ಥಿ.!

- Advertisement -
- Advertisement -

ಪುಷ್ಪ ಸಿನೆಮಾದ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದು, ಇದೀಗ ವಿಧ್ಯಾರ್ಥಿಯೊಬ್ಬ ಪ್ರಶ್ನೆ ಪತ್ರಿಕೆಯಲ್ಲಿ ಪುಷ್ಪ ಸಿನೆಮಾದ ಡೈಲಾಗ್ ಬರೆದಿದ್ದಾನೆ.

ಕೊಲ್ಕತ್ತಾದ 10ನೇ ತರಗತಿಯ ವಿದ್ಯಾರ್ಥಿಯು ಉತ್ತರ ಪತ್ರಿಕೆಯಲ್ಲಿ ಪುಷ್ಪ ಸಿನಿಮಾದ ಸಂಭಾಷಣೆಯನ್ನು ಬರೆದಿದ್ದು, ಆ ಉತ್ತರ ಪತ್ರಿಕೆಯ ಫೋಟೋದೊಂದಿಗೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಕ್ರೇಜ್ ಮತ್ತೊಂದು ಹಂತಕ್ಕೆ ಹೋಗಿದೆ.

ಶಾಲಾ ವಿದ್ಯಾರ್ಥಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ‘ಪುಷ್ಪಾ, ಪುಷ್ಪ ರಾಜ್, ಅಪುನ್ ಲಿಖೇಗಾ ನಹೀ’ ಎಂದು ಬರೆದಿದ್ದು, ಉತ್ತರ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಸಿನಿಮಾದ ಮೂಲ ಸಂಭಾಷಣೆಯಲ್ಲಿ ‘ಮೇ ಜುಕೇಗಾ ನಹಿ’ ಎಂದು ಇತ್ತು. ಅದನ್ನು ತನ್ನದೇ ಶೈಲಿಯಲ್ಲಿ ಬದಲಾಯಿಸಿಕೊಂಡಿರುವ ಈ ವಿದ್ಯಾರ್ಥಿ ತನಗೆ ಬೇಕಾದಂತೆ ಬದಲಾಯಿಸಿಕೊಂಡು ಡೈಲಾಗ್ ಬರೆದಿದ್ದಾನೆ.

- Advertisement -

Related news

error: Content is protected !!