Tuesday, July 21, 2026
spot_imgspot_img
spot_imgspot_img

ಬಿಹಾರದ ದೇವಾಲಯದಲ್ಲಿ ಕಾಲ್ತುಳಿತ–8 ಮಂದಿ ಸಾವು

- Advertisement -
- Advertisement -

ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ಮಾತಾ ಮಂದಿರದಲ್ಲಿಇಂದು (ಮಂಗಳವಾರ) ಭೀಕರ ಕಾಲ್ತುಳಿತ ಸಂಭವಿಸಿದೆ. 8 ಭಕ್ತರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಮಹಿಳೆಯರಾಗಿದ್ದಾರೆ.

ನಳಂದ ಜಿಲ್ಲೆಯ ಬಿಹಾರ ಶರೀಫ್‌ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಮಾಘ್ರಾ ಗ್ರಾಮದಲ್ಲಿರುವ ಶೀತಲಾದೇವಿ (ಶೀತ್ಲಾಷ್ಟಮಿ) ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ.

ಇಂದು ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ, ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು ಎಂದು ವರದಿ ಮೂಲಕ ತಿಳಿದು ಬಂದಿದೆ

- Advertisement -

Related news

error: Content is protected !!