Saturday, April 20, 2024
spot_imgspot_img
spot_imgspot_img

ಪೆರುವಾಯಿ: (ಫೆ. 20 – 22) ಶ್ರೀ ಮೂವರ್ ದೈವಂಗಳು ಪಂಜುರ್ಲಿ-ಪಿಲಿಚಾಮುಂಡಿ ದೈವಗಳ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೋತ್ಸವ

- Advertisement -G L Acharya panikkar
- Advertisement -

ಪೆರುವಾಯಿ: ಶ್ರೀ ಮೂವರ್ ದೈವಂಗಳು ಪಂಜುರ್ಲಿ, ಪಿಲಿಚಾಮುಂಡಿ ದೈವಗಳ ಸನ್ನಿಧಿ ಬದಿಯಾರು ಪೆರುವಾಯಿಯಲ್ಲಿ ಫೆಬ್ರವರಿ 20 ರಿಂದ 22 ರ ವರೆಗೆ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ. ಫೆಬ್ರವರಿ 20 ರಂದು ರಾತ್ರಿ ದೈವಗಳ ಕೀರ್ವಾಳು ಭಂಡಾರ ಏರಿಸುವುದು, ಫೆ.21 ರಂದು ಮಧ್ಯಾಹ್ನ ನಂತರ ತಂಬಿಲ, ಕೊಟ್ಯದಾಯನ, ಶ್ರೀ ದೈವಂಗಳ ನೇಮ ನಡೆಯಲಿದೆ. ಸಂಜೆ 5 ರ ನಂತರ ಪಂಜುರ್ಲಿ ದೈವದ ನೇಮ ನಡೆಯಲಿದೆ.


ಫೆ.22 ರಂದು ಮಧ್ಯಾಹ್ನ ನಂತರ ತಂಬಿಲ ಶ್ರೀ ದೈವಗಳ ನೇಮ, ಸಂಜೆ 4 ರ ನಂತರ ಪಂಜುರ್ಲಿ ದೈವದ ಹರಕೆ ನೇಮೋತ್ಸವ ನಡೆಯಲಿದೆ. ರಾತ್ರಿ 7 ಶ್ರೀ ಪಿಲಿಚಾಮುಂಡಿ ದೈವದ ನೇಮ, ರಾತ್ರಿ 2 ಗಂಟೆಯ ನಂತರ ತಂಬಿಲ, ಶ್ರೀ ದೈವಂಗಳ ಒಲಸರಿ, ಬಳಿಕ ಶ್ರೀ ದೈವಂಗಳ ಭಂಡಾರ ಇಳಿಸುವುದು. ಜಾತ್ರೋತ್ಸವದ ಅಂಗವಾಗಿ ಲಕುಮಿ ಕಿಶೋರ್ ಡಿ.ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಾಲ್ದ ಕಲಾವಿದೆರ್ ಅಭಿನಯದ ಲೇಲೆಪಾಡಡೆ ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.

- Advertisement -

Related news

error: Content is protected !!