Saturday, April 27, 2024
spot_imgspot_img
spot_imgspot_img

ಪೊಲೀಸರಿಗೆ ತಲೆ‌ ನೋವಾದ ಪಿಎಫ್‌ಐ ಬಂಧಿತ ಕಾರ್ಯಕರ್ತರ ಕೋಡ್​ ವರ್ಡ್​ಗಳು

- Advertisement -G L Acharya panikkar
- Advertisement -

ಬೆಂಗಳೂರು: ಪಿಎಫ್‌ಐ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಆದರೆ, ಆರೋಪಿತರ ಕೆಲ ಕೋಡ್​​ ವರ್ಡ್​ಗಳು ಇದ್ದು, ಅದನ್ನು ಡಿಕೋಡ್ ಮಾಡುವುದು ಸವಾಲಾಗಿದೆ.

ಈಗಾಗಲೇ 15 ಜನರು ಸಿಕ್ಕಿಬಿದ್ದಿದ್ದು, ಅವರನ್ನು ಆಡುಗೋಡಿ ಟೆಕ್ನಿಕಲ್ ಸೆಲ್​ನಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ. ಕಚೇರಿ ಮತ್ತು ಮನೆಗಳ ಮೇಲೆ ದಾಳಿ ವೇಳೆ ವಶಕ್ಕೆ ಪಡೆದುಕೊಂಡಿರುವ ವಸ್ತುಗಳಲ್ಲಿ ಕೆಲವೊಂದು ಡೈರಿಗಳು ಸಿಕ್ಕಿದೆ‌. ಆ ಡೈರಿಯಲ್ಲಿ ಉಲ್ಲೇಖಿಸಿರುವ ಕೋಡ್​ ವರ್ಡ್​ಗಳು ಈಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರಮುಖ ಆರೋಪಿಗಳಾದ ನಾಸೀರ್ ಪಾಷಾ ಹಾಗೂ ಮೊಹಮ್ಮದ್ ಅಶ್ರಫ್ ಇಬ್ಬರನ್ನು ಪೂರ್ವ ವಿಭಾಗ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರು ಉಳಿದ ಆರೋಪಿಗಳಿಗೆ ದೇಶ ವಿರೋಧಿ ಕೃತ್ಯಗಳಿಗೆ ಬೇಕಾದಂತಹ ಸೂಚನೆ ಹಾಗೂ ಕೆಲವೊಂದು ಪ್ರಚೋದನಾಕಾರಿ ಅಂಶಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು ಎನ್ನಲಾಗುತ್ತಿದೆ.

ಅಷ್ಟೇ ಅಲ್ಲ, ಇವರಿಬ್ಬರ ಅಕೌಂಟ್​ಗೆ ವಿದೇಶಿ ಫಂಡಿಂಗ್ ಆಗಿರುವುದರ ಬಗ್ಗೆ ಕೂಡ ಬ್ಯಾಂಕ್ ರೆಕಾರ್ಡ್ ಮೂಲಕ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಇನ್ನೂ ಕೆಲ ಆರೋಪಿಗಳ ಬಳಿ ಡೈರಿಗಳು ಸಿಕ್ಕಿದ್ದು, ಆ ಡೈರಿಯಲ್ಲಿ ಕೋಡ್​ ವರ್ಡ್​​ ರೀತಿಯಲ್ಲಿ ಒಂದಷ್ಟು ಶಬ್ಧಗಳನ್ನು ಬಳಕೆ ಮಾಡಲಾಗಿದೆ. ಅದರಲ್ಲಿ ‘training to be organized’ ಎಂಬ ಶಬ್ದವೇ ಸ್ವಲ್ಪ ಮಟ್ಟಿಗೆ ಆತಂಕ ಹುಟ್ಟಿಸುವಂತದ್ದು, ಈ ಶಬ್ಧವನ್ನು ಯಾವ ಅರ್ಥದಲ್ಲಿ ಬರೆಯಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ.

ಇದು ಭಯೋತ್ಪಾದಕ ಕೃತ್ಯದಾ ಟ್ರೈನಿಂಗಾ?, ಕೋಮುಗಲಭೆಗೆ ಸೃಷ್ಟಿಗಾ ಅಥವಾ ಸ್ಫೋಟಕ ತಯಾರಿಸಲು ತರಬೇತಿಯಾ ಎಂಬುದರ ಬಗ್ಗೆ ಮೊದಲು ಪೊಲೀಸರು ತಿಳಿದುಕೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ. ಈ ಹದಿನೈದೂ ಜನರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!