Friday, April 26, 2024
spot_imgspot_img
spot_imgspot_img

ಪೊಲೀಸ್​ ಕಾಲೋನಿಗೆ ನುಗ್ಗಿ ಕೈಚಳಕ ತೋರಿಸಿದ ಖದೀಮರು; ದೇವಸ್ಥಾನದ ಹುಂಡಿ, 3 ಮನೆಗೆ ಕನ್ನ

- Advertisement -G L Acharya panikkar
- Advertisement -

ಬಾಗಲಕೋಟೆ: ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ, ರಾತ್ರೋ ರಾತ್ರಿ ನಗರದ ಪೊಲೀಸ್​ ಕಾಲೋನಿಗೆ ನುಗ್ಗಿದ ಖದೀಮರು 3 ಮನೆ, ದೇವಸ್ಥಾನಗಳಿಗೆ ಕನ್ನ ಹಾಕಿ ಅಪಾರ ಪ್ರಮಾಣದ ಹಣ ಮತ್ತು ಚಿನ್ನದ ಅಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.

ಜಿಲ್ಲೆಯ ಸೀಗಿಕೇರಿ ಕ್ರಾಸ್ ಬಳಿ ಇರುವ ಪದ್ಮನಯನ ನಗರದಲ್ಲಿ, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರಿಂದ ಇದನ್ನು ಪೊಲೀಸ್​ ಕಾಲೋನಿ ಎಂದೇ ಕರೆಯಲಾಗುತ್ತದೆ. ಪೊಲೀಸರೆ ಇರುವ ನಗರದಲ್ಲಿ ಕನ್ನ ಹಾಕಿರುವ ಚಾಲಾಕಿ ಕಳ್ಳರು ನಿವೃತ್ತ ಯೋಧರೊಬ್ಬರು ಬಾಡಿಗೆ ಕೊಟ್ಟಿದ್ದ ಮನೆಯ ಕೀಲಿ ಮುರಿದು ತಿಜೋರಿ ಒಡೆದು 4 ಲಕ್ಷ ಮೌಲ್ಯದ ಆಭರಣಗಳನ್ನು ಎಗರಿಸಿದ್ದಾರೆ.

ಅಷ್ಟೇ ಅಲ್ಲದೇ ನಗರದ ಆಂಜನೇಯ ದೇವಸ್ಥಾನಕ್ಕೂ ಲಗ್ಗೆ ಇಟ್ಟ ಖತರ್ನಾಕ್​ ಕಳ್ಳರು ದೇವಸ್ಥಾನದ ಹುಂಡಿ ಮುರಿದು, ಹುಂಡಿಯ ಹಣವನ್ನು ಹೊತ್ತೊಯ್ದಿದ್ದಾರೆ. ಈನ್ನು ಖದೀಮರ ಸರಣಿಗಳ್ಳತನಕ್ಕೆ ಕಾಲೋನಿಯ ನಿವಾಸಿಗಳು ಬೆಚ್ಚಿಬಿದ್ದಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!