Friday, April 26, 2024
spot_imgspot_img
spot_imgspot_img

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಶಾರೀಕ್‌ ಜೊತೆಗಿದ್ದ ನಾಲ್ವರ ಗುರುತು ಪತ್ತೆ..! ವಿದೇಶಿಗನೊಂದಿಗೂ ಸಂಪರ್ಕ

- Advertisement -G L Acharya panikkar
- Advertisement -

ಕಾಸರಗೋಡು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ತಾರೀಕ್ ಸ್ಫೋಟದ ಮೊದಲು ಕೊಚ್ಚಿಗೆ ಆಗಮಿಸಿ ಅಲ್ಲಿ ವ್ಯವಹಾರ ನಡೆಸಿದವರ ಪೈಕಿ ನಾಲ್ವರ ಗುರುತನ್ನು ತನಿಖಾ ತಂಡ ಪತ್ತೆಹಚ್ಚಿದೆ.

ಹೀಗೆ ಗುರುತು ಪತ್ತೆಯಾದವರಲ್ಲಿ ಓರ್ವ ವಿದೇಶಿ, ಇಬ್ಬರು ಕೇರಳೀಯರು ಹಾಗೂ ಓರ್ವ ತಮಿಳುನಾಡು ನಿವಾಸಿಯ ಒಳಗೊಂಡಿದ್ದಾನೆ. ಆದರೆ ಇವರ ಹೆಸರು ಮತ್ತು ವಿಳಾಸ ಮತ್ತಿತರ ಮಾಹಿತಿಗಳನ್ನು ತನಿಖಾ ತಂಡ ಇನ್ನೂ ಹೊರಬಿಟ್ಟಿಲ್ಲ.

ಮಂಗಳೂರು ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌.ಐ.ಎ)ಗೆ ಹಸ್ತಾಂತರಿಸಲಾಗಿದ್ದರೂ ಕರ್ನಾಟಕ ವಿಶೇಷ ತನಿಖಾ ತಂಡ ಈಗಲೂ ಮುಂದುವರಿಸುತ್ತಿದೆ. ಕೇರಳದಲ್ಲಿ ನಡೆಸಲಾಗುತ್ತಿರುವ ತನಿಖೆಗೆ ಕೇರಳ ಪೊಲೀಸರೂ ಪೂರ್ಣ ಸಹಕಾರ ನೀಡುತ್ತಿದ್ದಾರೆ.

ತನಿಖಾ ತಂಡ ಕಳೆದ ಎರಡು ವಾರಗಳಿಂದ ಕೊಚ್ಚಿಯಲ್ಲೇ ನೆಲೆಯೂರಿದ್ದು, ಅಗತ್ಯದ ಎಲ್ಲಾ ಪುರಾವೆಗಳು ಹಾಗೂ ಮಾಹಿತಿ ಗಳನ್ನು ಸಂಗ್ರಹಿಸತೊಡಗಿದೆ. ತನಿಖಾ ತ೦ಡಕ್ಕೆ ಕೇರಳ ಪೊಲೀಸ್ ವಿಭಾಗಗಳ ಓರ್ವ ಡಿವೈಎಸ್ಪಿ ಮತ್ತು ಇಬ್ಬರು ಸಬ್ ಇನ್‌ಸ್ಪೆಕ್ಟರ್‌ಗಳು ಅಗತ್ಯದ ನೆರವು ಹಾಗೂ ಸಹಕಾರ ನೀಡುತ್ತಿದ್ದಾರೆ.

ಆರೋಪಿ ತಾರೀಕ್ ಕೊಚ್ಚಿಯಲ್ಲಿ ಪರಿಚಯಗೊಂಡವರ ಪೈಕಿ ಕೇರಳೀಯರಾದ ಇಬ್ಬರು ದೀರ್ಘಕಾಲದಿಂದ ವಿದೇಶದಲ್ಲಿ ದುಡಿದವರಾಗಿದ್ದಾರೆ. ಅವರ ಸ೦ಬ೦ಧಿಕರು ಯಾರು ಎ೦ಬುವುದನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಈ ಇಬ್ಬರ ಜತೆ ತಮಿಳುನಾಡು ನಿವಾಸಿಯೂ ವಿದೇಶದಲ್ಲಿ ದುಡಿದಿದ್ದನು. ಆದರೆ ಶಾರೀಕ್ ಪಂಚಯಗೊ೦ಡ ವಿದೇಶಿಯ ಕುರಿತಾದ ಸ್ಪಷ್ಟ ಚಿತ್ರಣ ತನಿಖಾ ತಂಡಕ್ಕೆ ಇನ್ನೂ ಲಭಿಸಿಲ್ಲ.

ಕೊಚ್ಚಿಯಲ್ಲಿ ಶಾರೀಕ್ ನಡೆಸಿದ ಡ್ರಗ್ಸ್ , ಚಿನ್ನ ಕಳ್ಳಸಾಗಾಟ, ಹಾಗೂ ಕಾಳಧನ ವ್ಯವಹಾರಗಳು ದೇಶದ್ರೋಹ ಪ್ರಕರಣಗಳಿಗೆ ಹೊಂದಿಕೊಳ್ಳುವ ರೀತಿಯದ್ದಾಗಿದೆ. ಎ೦ದು ತನಿಖಾ ತ೦ಡದ ನಿಗಮನವಾಗಿದೆ. ಉಗ್ರಗಾಮಿ, ವಿಧ್ವಂಸಕ ಕೃತ್ಯ ಇತ್ಯಾದಿ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದೇ ಶಾರೀಕ್‌ನ ಕೇರಳ ಸ೦ದರ್ಶನದ ಪ್ರಧಾನ ಉದ್ದೇಶವಾಗಿತ್ತೆ೦ಬುವುದೂ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

- Advertisement -

Related news

error: Content is protected !!