Friday, June 5, 2026
spot_imgspot_img
spot_imgspot_img

ಪ್ರತಿಭಾ ಕುಳಾಯಿ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪ; ತಾನು ಮಾಡಿದ ಪೋಸ್ಟ್‌ ಕುರಿತು ಸ್ಪಷ್ಟನೆ ನೀಡಿದ ಶ್ಯಾಮ ಸುದರ್ಶನ್ ಹೊಸಮೂಲೆ

- Advertisement -
- Advertisement -

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ ಅವರನ್ನು ಕಹಳೆ ನ್ಯೂಸ್‌ನ ಪ್ರಧಾನ ಸಂಪಾದಕ ಶ್ಯಾಮ ಸುದರ್ಶನ ಹೊಸಮೂಲೆ ಅವರು ಅವಹೇಳನ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದ್ದು ಈ ಬಗ್ಗೆ ಶ್ಯಾಮ ಸುದರ್ಶನ ಹೊಸಮೂಲೆ ಸ್ಪಷ್ಟನೆ ನೀಡಿದ್ದಾರೆ. ಶ್ಯಾಮ ಸುದರ್ಶನ್ ಅವರು ಟೋಲ್ ವಿರುದ್ಧ ಹೋರಾಟ ನಡೆಸಿದ ಪ್ರತಿಭಾ ಕುಳಾಯಿ ಅವರ ವಿಡಿಯೋಗೆ “ಮಲಗಿ ಮಾಡಿ ಒಳ್ಳೆ ಅಭ್ಯಾಸ ಉಂಟು ಮಾರ್‍ರೇ” ಎಂದು ಬರೆದುಕೊಂಡಿದ್ದರು.

ಪ್ರತಿಭಾ ಕುಳಾಯಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಟೋಲ್‌ಗೇಟ್‌ ವಿವಾದಕ್ಕೆ ಸಂಬಂಧಿಸಿ ವಿವಾದ ಎದ್ದಿದ್ದು ಪ್ರತಿಭಾ ಕುಳಾಯಿ ಅವರು ಪ್ರತಿಭಟನೆಯ ವೇಳೆ ಓವರ್‌ ರಿಯಾಕ್ಟ್‌ ಆಗಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು ಈ ಬಗ್ಗೆ ನಾನು ಪೋಸ್ಟ್‌ ಮಾಡಿದ್ದೇನೆ. ಆದರೆ ಪ್ರತಿಭಾ ಕುಳಾಯಿ ಅವರು ಅದನ್ನು ಬೇರೆ ತೆರನಾಗಿ ಅರ್ಥೈಸಿಕೊಂಡಿದ್ದಾರೆ. ನನ್ನ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರಮಣ ನಡೆಯುತ್ತಿದೆ. ಆಘಾತಕಾರಿ ಬೆಳವಣಿಗೆ ಇದಾಗಿದೆ. ಆದರೆ ನಾನು ಹೆಣ್ಣು ಮಕ್ಕಳಿಗೆ ಯಾವ ರೀತಿ ಗೌರವ ಕೊಡಬೇಕೆಂದು ತಿಳಿದುಕೊಂಡಿದ್ದೇನೆ. ಮುಂದೆ ಈ ಬಗ್ಗೆ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧನಾಗಿದ್ದೇನೆ, ನನಗೆ ನ್ಯಾಯಂಗ, ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇದೆ. ಧರ್ಮ, ಸತ್ಯದ ಪರ ನ್ಯಾಯ ಸಿಗುತ್ತದೆ ಎಂದು ಶ್ಯಾಮ ಸುದರ್ಶನ ಹೊಸಮೂಲೆ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಪ್ರತಿಭಾ ಕುಳಾಯಿ ಅವರು ಕುಂಬಳಕಾಯಿ ಕಳ್ಳಿಯಂತೆ ಹೆಗಲು ಮುಟ್ಟಿ ನೋಡಿದ ಕಥೆ. ಇದಕ್ಕೆ ಪತ್ರಕರ್ತ ಶ್ಯಾಮ್ ಸುದರ್ಶನ್ ಹೊಸಮೂಲೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಸ್ಪಷ್ಟೀಕರಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

- Advertisement -

Related news

error: Content is protected !!