Wednesday, September 16, 2026
spot_imgspot_img
spot_imgspot_img

ಪ್ರವೀಣ್ ಹತ್ಯೆ ಹಿನ್ನೆಲೆ; ಕೊಡಿಪ್ಪಾಡಿ ಬಿಜೆಪಿ ಬೂತ್ ಅಧ್ಯಕ್ಷ ಮನ್ಮಥ ಶೆಟ್ಟಿ ರಾಜೀನಾಮೆ

- Advertisement -
- Advertisement -

ಪುತ್ತೂರು: ಪ್ರವೀಣ್ ಹತ್ಯೆ ಹಿನ್ನೆಲೆ ಬಿಜೆಪಿ ವಿರುದ್ಧ ಆಕ್ರೋಶಿತರಾದ ಪಕ್ಷದ ಜವಾಬ್ದಾರಿ ಹೊಂದಿರುವ ಹಲವು ಪ್ರಮುಖರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.

ಬಿಜೆಪಿ ವಿರುದ್ಧ ಆಕ್ರೋಶಿತರಾದ ಪಕ್ಷದ ಜವಾಬ್ದಾರಿ ಹೊಂದಿರುವ ಹಲವು ಪ್ರಮುಖರು ಪಕ್ಷದಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಅದೇ ರೀತಿ ಕೊಡಿಪ್ಪಾಡಿಯ 72ನೇ ಬೂತ್ ಅಧ್ಯಕ್ಷ ಮನ್ಮಥ ಶೆಟ್ಟಿ ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದು, ಕಳೆದ ವಿಧಾನಸಭಾ, ಲೋಕಸಭಾ, ಗ್ರಾ.ಪಂ ಚುನಾವಣೆಯಲ್ಲಿ ಪಕ್ಷಕ್ಕೆ ನಿಷ್ಠೆಯಿಂದ ದುಡಿದು, ನೀಡಿದ ಜವಾಬ್ದಾರಿಯನ್ನು ನಿಭಾಯಿಸಿ ಪಕ್ಷವನ್ನು ಗೆಲ್ಲಿಸುವಲ್ಲಿ ಶ್ರಮ ಪಟ್ಟಿದ್ದಾರೆ.

ಹಿಂದುತ್ವವೇ ದ್ಯೇಯ ವಾಕ್ಯ ಎಂಬ ನಿಟ್ಟಿನಲ್ಲಿ ಮತಯಾಚಿಸಿ ಪ್ರಸ್ತುತ ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಸಾವಿಗೆ ನ್ಯಾಯ ದೊರಕಿಸದೆ ಕೇವಲ ಭರವಸೆ ನೀಡುತ್ತಿರುವ ಹಿನ್ನೆಲೆ ಪ್ರಸ್ತುತ ವಿದ್ಯಾಮಾನಗಳನ್ನು ಗಮನಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

Related news

error: Content is protected !!