Monday, April 29, 2024
spot_imgspot_img
spot_imgspot_img

ಪ್ರಿಯಕರನ ಬಳಿ ಖರ್ಚಿಗೆ ಹಣವಿಲ್ಲವೆಂದು ದೊಡ್ಡಪ್ಪನ ಮನೆಯನ್ನೇ ದೋಚಿದ ಪ್ರೇಯಸಿ

- Advertisement -G L Acharya panikkar
- Advertisement -
vtv vitla

ಬೆಂಗಳೂರು: ಖರ್ಚಿಗೆ ಹಣವಿಲ್ಲವೆಂದು ಪ್ರಿಯಕರನ ಜೊತೆ ಸೇರಿ ದೊಡ್ಡಪ್ಪನ ಮನೆಯನ್ನೇ ದೋಚಿದ ಪ್ರೇಮಿಗಳು ಪೀಣ್ಯ ಪೊಲೀಸರ ಅತಿಥಿಯಾಗಿದ್ದಾರೆ.

ಬಿ.ಕಾಂ ವಿದ್ಯಾರ್ಥಿನಿ ದೀಕ್ಷಿತಾ ಮತ್ತು ಮೆಡಿಕಲ್‌ ವಿದ್ಯಾರ್ಥಿ ಮಧು ಬಂಧಿತರು. ಆರೋಪಿಗಳಿಂದ 30 ಸಾವಿರ ರೂ. ನಗದು ಮತ್ತು 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಮಧು ಮತ್ತು ದೀಕ್ಷಿತಾ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಮಧ್ಯೆ ಮಧು, ತನ್ನ ಪ್ರಿಯತಮೆಗೆ ಖರ್ಚಿಗೆ ಹಣವಿಲ್ಲ ಎಂದು ತನ್ನ ಸಮಸ್ಯೆ ಹೇಳಿಕೊಂಡಿದ್ದಾನೆ. ಆಗ ದೀಕ್ಷಿತಾ, ನೆಲಗೆದರನಹಳ್ಳಿಯಲ್ಲಿರುವ ತನ್ನ ದೊಡ್ಡಪ್ಪ ತಿಮ್ಮೇಗೌಡರ ಬಳಿ ಸಾಕಷ್ಟು ಹಣ, ಚಿನ್ನಾಭರಣವಿದ್ದು, ಅದನ್ನು ಕಳ್ಳತನ ಮಾಡಿದರೆ ಸಮಸ್ಯೆ ಪರಿಹಾರ ಎಂದು ಸಲಹೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಜು. 8ರಂದು ಶಿರಾದಿಂದ ಬೆಂಗಳೂರಿಗೆ ಬಂದಿದ್ದ ಮಧು, ಕಳ್ಳತನಕ್ಕೆ ಸಂಚು ರೂಪಿಸಿ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ಹೇಳಿದರು.

ಮೆಡಿಕಲ್‌ ವಿದ್ಯಾರ್ಥಿಯಾಗಿರುವ ಮಧು, ಪಿಪಿಇ ಕಿಟ್‌ ಧರಿಸಿ ತಿಮ್ಮೇಗೌಡರ ಮನೆಯ ಕಾಂಪೌಂಡ್‌ ಒಳಗೆ ಮಾಟ ಮಂತ್ರದ ವಸ್ತುಗಳನ್ನು ಎಸೆದು ಪರಾರಿಯಾಗಿದ್ದ. ಅದೇ ವೇಳೆ ಮನೆಗೆ ಬಂದ ದೀಕ್ಷಿತಾ, ಕಾಂಪೌಂಡ್‌ ಬಳಿ ನೋಡಿ, ಮಾಟಮಂತ್ರದ ವಸ್ತುಗಳು ಯಾರ ಬಿಸಾಡಿದ್ದಾರೆ ಎಂದು ಮನೆಯವರನ್ನು ಕಾಂಪೌಂಡ್‌ ಬಳಿ ಕರೆ ತಂದಿದ್ದಳು. ಇತ್ತ ಎಲ್ಲರೂ ಆ ವಸ್ತುಗಳನ್ನು ಶುಚಿಗೊಳಿಸುವಾಗ, ಮನೆಯೊಳಗೆ ಹೋದ ದೀಕ್ಷಿತಾ, 90 ಸಾವಿರ ರೂ. ನಗದು, 200 ಗ್ರಾಂ ಚಿನ್ನಾಭರಣ ದೋಚಿದ್ದಳು. ಬಳಿಕ ಯಾರಿಗೂ ತಿಳಿಯದಂತೆ ಎಲ್ಲ ತೆಗೆದುಕೊಂಡು ಪರಾರಿಯಾಗಿದ್ದಳು. ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಶೋಧಿಸಿದಾಗ ಪಿಪಿಇ ಕಿಟ್‌ ಹಾಕಿಕೊಂಡು ಅಪರಿಚಿತ ವ್ಯಕ್ತಿ ಬಂದು ಹೋಗಿರುವುದು ಗೊತ್ತಾಗಿದೆ. ಬಳಿಕ ಟವರ್‌ ಲೋಕೇಷನ್‌ ಹಾಕಿಕೊಂಡು ಶಿರಾದಲ್ಲಿ ಆರೋಪಿಯನ್ನು ಬಂಧಿಸಿದ್ದು, ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!