Saturday, May 18, 2024
spot_imgspot_img
spot_imgspot_img

ಪ್ರೀತಿಯ ನಾಟಕವಾಡಿ ಯುವತಿಯರಿಗೆ ವಂಚನೆ; ನಗ್ನ ವೀಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕ ಸೆರೆ!

- Advertisement -G L Acharya panikkar
- Advertisement -
driving

ಬೆಂಗಳೂರು: ಯುವತಿಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಬ್ಲ್ಯಾಕ್‍ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದವನನ್ನು ನಗರದ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬ್ಯಾಡರಹಳ್ಳಿಯ ರಾಕೇಶ್ (26) ಎನ್ನಲಾಗಿದೆ.

ಆರೋಪಿ ರಾಕೇಶ್‌ ಪ್ರೀತಿಯ ನಾಟಕವಾಡಿ ಹುಡುಗಿಯರನ್ನು ಬಲೆಗೆ ಬೀಳಿಸಿಕೊಂಡು, ಬಳಿಕ ಯುವತಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರನ್ನು ನಗ್ನಗೊಳಿಸಿ, ಆಕೆಯ ಗಮನಕ್ಕೆ ಬಾರದಂತೆ ತನ್ನ ಮೊಬೈಲಿನಲ್ಲಿ ಖಾಸಗಿ ದೃಶ್ಯ ಸೆರೆ ಹಿಡಿಯುತ್ತಿದ್ದ. ಕೆಲ ದಿನಗಳ ಬಳಿಕ ಯುವತಿಯ ವಾಟ್ಸಪ್​ಗೆ ಖಾಸಗಿ ದೃಶ್ಯ ಕಳುಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದ.

ಹಣ ನೀಡದೇ ಹೋದರೆ ವೈರಲ್‌ ಮಾಡುವುದಾಗಿ ಬೆದರಿಕೆ ಇಡುತ್ತಿದ್ದ ಎನ್ನಲಾಗಿದೆ. ಕೆಲ ಹುಡುಗಿಯರು ಹಣ ನೀಡಿ ರಾಕೇಶನಿಗೆ ಕೈ ಮುಗಿದು ಸುಮ್ಮನಾಗಿದ್ದಾರೆ. ಈ ನಡುವೆ ಯುವತಿಯೊಬ್ಬಳು ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪರಿಣಾಮ ರಾಕೇಶ್‌ ಬಂಧನಕ್ಕೊಳಗಾಗಿದ್ದಾನೆ. ಈತನಿಂದ ವಶಪಡಿಸಿಕೊಂಡ ಮೊಬೈಲ್‌ನಲ್ಲಿ ಯುವತಿಯರ ಖಾಸಗಿ ದೃಶ್ಯಗಳು ಇದ್ದಾವೆ ಎನ್ನಲಾಗಿದೆ.

- Advertisement -

Related news

error: Content is protected !!