Sunday, June 14, 2026
spot_imgspot_img
spot_imgspot_img

ಪ್ಲಾಸ್ಟಿಕ್ ಪೊಟ್ಟಣದಲ್ಲಿ ಎಸೆದಿದ್ದ ಭ್ರೂಣದ ಮೇಲೆ ಹರಿದಾಡಿದ ವಾಹನಗಳು; ಛಿದ್ರಗೊಂಡ ಭ್ರೂಣದ ದೇಹ

- Advertisement -
- Advertisement -

ಬೆಂಗಳೂರು: ಪ್ಲಾಸ್ಟಿಕ್ ಪೊಟ್ಟಣದಲ್ಲಿ ಸುತ್ತಿಡಲಾಗಿದ್ದ ಭ್ರೂಣದ ಮೇಲೆ ವಾಹನಗಳು ಓಡಾಟ ನಡೆಸಿದ್ದು, ಭ್ರೂಣದ ದೇಹವು ಛಿದ್ರವಾಗಿ ಬಿದ್ದಿದ್ದ ಘಟನೆ ಬೆಂಗಳೂರಿನ ಹೊಯ್ಸಳ ಠಾಣಾ ವ್ಯಾಪ್ತಿಯ ಅಮೃತಹಳ್ಳಿಯಲ್ಲಿ ನಡೆದಿದೆ.

ಫೆ. 28ರಂದು ‘ಹೊಯ್ಸಳ ವಾಹನದ ಸಿಬ್ಬಂದಿ ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ಪಂಪಾ ಎಕ್ಸ್‌ಟೆನ್ಶನ್‌ಗೆ ಹೋದಾಗ, ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಪೊಟ್ಟಣ ರಕ್ತಸಿಕ್ತವಾಗಿದ್ದನ್ನು ನೋಡಿದ್ದರು. ಪ್ಲಾಸ್ಟಿ ಕ್ ಪರಿಶೀಲಿಸಿದಾಗ, ಅದರಲ್ಲಿ ಭ್ರೂಣವಿರುವುದು ಗೊತ್ತಾಗಿದೆ.

ಸುಮಾರು ಐದು ತಿಂಗಳ ಭ್ರೂಣವನ್ನು ಅಪರಿಚಿತರು ಕಸದ ಬುಟ್ಟಿಗೆ ಎಸೆದಿದ್ದು, ಕಸ ಎಂದು ಭಾವಿಸಿ ಬಿಬಿಎಂಪಿ ವಾಹನಕ್ಕೆ ತುಂಬಲಾಗಿತ್ತು . ‘ರಸ್ತೆಯಲ್ಲಿ ವಾಹನ ಹೋಗುವಾಗ ಪ್ಲಾಸ್ಟಿಕ್ ಪೊಟ್ಟಣ ಕೆಳಗೆ ಬಿದ್ದಿದೆ. ಹೀಗಾಗಿ ಗುರುತು ಸಿಗದ ರೀತಿಯಲ್ಲಿ ಭ್ರೂಣ ಛಿದ್ರವಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!