Friday, March 29, 2024
spot_imgspot_img
spot_imgspot_img

ಫೆ. 13ರಂದು ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಾನದಲ್ಲಿ ಕಾಲಾವಧಿ ಮೆಚ್ಚಿ ಜಾತ್ರೋತ್ಸವ

- Advertisement -G L Acharya panikkar
- Advertisement -

ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಾನದಲ್ಲಿ ಫೆಬ್ರವರಿ 13ರಂದು ಕಾಲಾವಧಿ ಮೆಚ್ಚಿ ಜಾತ್ರೋತ್ಸವವು ನಡೆಯಲಿದೆ. ಫೆ. 12 ರಂದು ರಾತ್ರಿ ಬೆಂಞಂತ್ತಿಮಾರ್ ಗುತ್ತು ಭಂಡಾರದ ಚಾವಡಿಯಿಂದ ಉಳ್ಳಾಲ್ತಿ ಅಮ್ಮನವರ ಭಂಡಾರ ಹೊರಡಲಿದೆ.

ಫೆ. 13 ರಂದು ಕೆಲಿಂಜ ಕ್ಷೇತ್ರದಲ್ಲಿ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ ನಡೆಯಲಿದೆ. ಹೂವಿನ ಪೂಜೆ, ತ್ರಿ ಮಧುರಾ, ಕುಂಕುಮಾರ್ಚನೆ, ಪಂಚಕಜ್ಜಾಯ, ಕರ್ಪೂರಾರತಿ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ. 14 ರಂದು ಬೆಳಗ್ಗೆ ಶ್ರೀ ಮಲರಾಯ ದೈವದ ನೇಮೋತ್ಸವ ನಡೆಯಲಿದೆ.

ಫೇ.10 ರ ಗುರುವಾರ ಸಂಜೆ ಗಂಟೆ 4 ರಿಂದ ಹಸಿರುವಾಣಿ ಹೊರೆಕಾಣಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಸ್ವೀಕರಿಸಲಾಗುವುದು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಫೆ. 12 ರಂದು ಬೆಳಗ್ಗೆ ಗಂಟೆ 8.30ಕ್ಕೆ: ತಂತ್ರಿವರ್‍ಯರ ಆಗಮನ, ಪ್ರಾರ್ಥನೆ, ಬಿಂಬ ಶುದ್ಧಿ ನಡೆಯಲಿದೆ. ಬಳಿಕ ಶ್ರೀ ದೇವಿ ಭಕ್ತ ವೃಂದ ನಡುವಳಚ್ಚಿಲು ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30 ಗಂಟೆಗೆ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಮತ್ತು ಪರಿವಾರ ದೈವಗಳಿಗೆ ತಂಬಿಲಸೇವೆ, ಹೂವಿನ ಪೂಜೆ, ಕುಂಕುಮಾರ್ಚನೆ, ಕರ್ಪೂರಾರತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಸೇವೆ ನಡೆಯಲಿದೆ.

ಸಂಜೆ 5.30ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ದೈವದ ಪ್ರಸಾದ ರೂಪವಾಗಿ ಸಾರ್ವಜನಿಕ ಅನ್ನಸಂತರ್ಪಣೆ ಭಂಡಾರದ ವತಿಯಿಂದ ನಡೆಯಲಿದೆ.

ಫೆ. 12 ರಂದು ರಾತ್ರಿ 8.45ಕ್ಕೆ “ಶ್ರೀದೇವಿ ಭ್ರಮರಾಂಭಿಕೆ” ಯಕ್ಷಗಾನ ತಾಳಮದ್ದಳೆ, ಬಳಿಕ ರಾತ್ರಿ ಗಂಟೆ 12.30ರಿಂದ: ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿ ಕೆಲಿಂಜ – ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 1.30ಕ್ಕೆ : ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಭಂಡಾರ ಹೊರಡುವುದು.

vtv vitla
vtv vitla

- Advertisement -

Related news

error: Content is protected !!