Friday, May 3, 2024
spot_imgspot_img
spot_imgspot_img

ಫೈನಾನ್ಸ್‌ ಕಂಪನಿಗಳಿಗೆ ಬುರ್ಖ ತಂದ ಸಂಕಷ್ಟ; ಯಾರದ್ದೋ ಹೆಸರಿನಲ್ಲಿ ಇನ್ಯಾರಿಗೋ ಸಾಲ‌

- Advertisement -G L Acharya panikkar
- Advertisement -

ಕೊಡಗು: ಮೈಕ್ರೋಫೈನಾನ್ಸ್‌ ಕಂಪೆನಿಗಳ ಸಾಲ ನೀಡುವ ವಿಚಾರದಲ್ಲಿ ವಂಚನೆ ಆಗಿದೆ. ಮಹಿಳೆಯೊಬ್ಬರು ನಕಲಿ ದಾಖಲೆ ನೀಡಿ ಸಾಲ ಪಡೆದಿದ್ದಾಳೆ. ಆದರೆ ದಾಖಲೆಯಲ್ಲಿರುವ ಫೋಟೋ ಮತ್ತು ಮಹಿಳೆಯ ಮುಖದ ವ್ಯತ್ಯಾಸವನ್ನು ಗುರುತಿಸದೆ ನೇರವಾಗಿ ಲಕ್ಷಾಂತರ ರೂಪಾಯಿ ಸಾಲ ನೀಡಿದ ಫೈನಾನ್ಸ್ ಕಂಪನಿಗಳು ಸಂಕಷ್ಟಕ್ಕೆ ಒಳಗಾಗಿವೆ.

ಆಶಿಯಾ ಎಂಬಾಕೆ ಕೊಡಗಿನ ಕುಶಾಲನಗರ ಪಟ್ಟಣದಲ್ಲಿನ ಸಮಸ್ತ, ಬೆಲ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪೆನಿಗಳಿಗೆ ಆಗಮಿಸಿ ತನ್ನದೇ ಹೆಸರಿನ ಬೇರೆಯವರ ಆಧಾರ್ ಕಾರ್ಡ್ ನೀಡಿ ಲಕ್ಷಾಂತರ ಸಾಲ ಮಾಡಿದ್ದಾಳೆ. ಆದರೆ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ಆಕೆಯ ಬುರ್ಖಾ ತೆಗೆದು ಮುಖ‌ ಪರಿಶೀಲಿಸದೇ ಸಾಲ ಮಂಜೂರು ಮಾಡಿದ್ದಾರೆ. ಪರಿಣಾಮ ಲಕ್ಷಾಂತರ ರೂಪಾಯಿಗಳನ್ನು ಫೈನಾನ್ಸ್ ಕಂಪನಿಗಳು ಕಳೆದುಕೊಂಡಿವೆ.

ವಂಚಕಿ ಆಶಿಯಾ ಇದೇ ರೀತಿ ಹಲವು ಫೈನಾನ್ಸ್ ಕಂಪೆನಿಗಳಿಗೆ ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಫೈನಾನ್ಸ್​ ಕಂಪನಿಗಳು ಮಾಡಿದ ತಪ್ಪಿನಿಂದಾಗಿ ವಂಚನೆಗೊಳಗಾದ ಆಧಾರ್ ಕಾರ್ಡ್ ಮಾಲೀಕರು ಪರದಾಡುವಂತಾಗಿದೆ. ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸುತ್ತಿದ್ದು, ನ್ಯಾಯ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಂಚನೆಗೊಳಗಾದ ಮಡಿಕೇರಿ ನಿವಾಸಿ ಮಿಶ್ರಿಯಾ ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!