Thursday, July 23, 2026
spot_imgspot_img
spot_imgspot_img

ಬಂಟ್ವಾಳ: ಅಂಗಡಿಯನ್ನು ಯಾಕೆ ತಡವಾಗಿ ತೆರೆಯುತ್ತೀಯಾ ಪ್ರಶ್ನಿಸಿ ವ್ಯಕ್ತಿಗೆ ಚೂರಿ ಇರಿತ

- Advertisement -
- Advertisement -
vtv vitla
vtv vitla

ಬಂಟ್ವಾಳ: ಮಲ್ಕಾರ್ ಎಂಬಲ್ಲಿ ಅಂಗಡಿ ತೆರೆಯುತ್ತಿದ್ದ ವೇಳೆ ಅಂಗಡಿ ಮಾಲಕನು ಏಕಾಏಕಿ ಬಂದು ‘ಯಾಕೆ ಅಂಗಡಿಯನ್ನು ತಡವಾಗಿ ತೆರೆಯುತ್ತೀಯಾ’ ಎಂದು ಹೇಳಿ ಹರಿತವಾದ ಆಯುಧದಿಂದ ಇರಿದು ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸದಕತುಲ್ಲಾ (35) ಎನ್ನಲಾಗಿದೆ.

ಪ್ರಕರಣದ ವಿವರ:
ಬಂಟ್ವಾಳ ಸಮೀಪದ ಮೆಲ್ಕಾರ್ ಎಂಬಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಬಟ್ಟೆ ಅಂಗಡಿಯನ್ನು ಸದಕತುಲ್ಲಾ 7 ವರ್ಷಗಳ ಹಿಂದೆ ಬಾಡಿಗೆಗಾಗಿ ನಿಸಾರ ಅಹಮ್ಮದ್ ರವರಿಂದ ಪಡೆದಿದ್ದರು.

ಆದರೆ ನಿನ್ನ ಗಾರ್ಮೆಂಟ್ಸ್ ಅಂಗಡಿ ತೆರೆಯುತ್ತಿದ್ದ ಸಂದರ್ಭ ನಿಸಾರ ಅಹಮ್ಮದ್ ಏಕಾಏಕಿ ಅಂಗಡಿಯ ಹತ್ತಿರ ಬಂದು ಯಾಕೆ ಅಂಗಡಿಯನ್ನು ತಡವಾಗಿ ತೆರೆಯುತ್ತೀಯಾ ಎಂದು ಪ್ರಶ್ನಿಸಿದ್ದಾರೆ.

Can't police prevent a murder?

ಬಳಿಕ ಆತನ ಅಡುಗೆ ಕೋಣೆಯಲ್ಲಿದ್ದ, ಹರಿತವಾದ ಆಯುಧದಿಂದ ಸದಕತಲ್ಲಾ ಎಡಕಣ್ಣಿನ ಕೆಳಭಾಗ, ಮೂಗಿನ ಬಲಭಾಗ, ಎಡಕಿವಿಯ ಮೇಲ್ಬಾಗ, ಬಲಕಣ್ಣಿನ ಬಲಬದಿ, ಬಲಗಲ್ಲ ಎಡ ಮತ್ತಿಗೆ ಮತ್ತು ಕುತ್ತಿಗೆಯ ಹಿಂಭಾಗ, ಎದೆಯ ಭಾಗಕ್ಕೆ ಗೀರಿದ್ದಾರೆ. ಆಮೇಲೆ ನಿನ್ನನ್ನು ನೋಡುತ್ತೇನೆ, ನಿನ್ನನ್ನು ಕೊಲ್ಲುತ್ತೇನೆ ನಿನ್ನನ್ನು ಶೂಟ್ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಘಟನೆ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

suvarna gold
- Advertisement -

Related news

error: Content is protected !!