Tuesday, June 9, 2026
spot_imgspot_img
spot_imgspot_img

ಬಂಟ್ವಾಳ: ಎಲೆಕ್ಟ್ರಾನಿಕ್ಸ್ ಶೋ ರೂಂ ನಲ್ಲಿ ಬೆಂಕಿ ಅವಘಡ

- Advertisement -
- Advertisement -

ಬಂಟ್ವಾಳ: ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಬಿಸಿರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಂಭಾಗದಲ್ಲಿರುವ ಪ್ರಿಯಾ ಎಲೆಕ್ಟ್ರಾನಿಕ್ಸ್ ಮಳಿಗೆಯ ಮೇಲಿನ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ .

ಎಲೆಕ್ಟ್ರಾನಿಕ್ಸ್ ಜೊತೆಗೆ ಕೊಮಾಕಿ ಕಂಪೆನಿಗೆ ಸೇರಿದ ದ್ವಿಚಕ್ರವಾಹನಗಳ ದಾಸ್ತಾನು ಇರಿಸಲಾಗಿರುವ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೊಮಾಕಿ ಕಂಪೆನಿಯ ಬ್ಯಾಟರಿ ಚಾಲಿತ ಸ್ಕೂಟರ್ ಗಳು ಇಲ್ಲಿದ್ದು, ಇದರ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಹಚ್ಚಿಕೊಂಡಿದೆಯಾ ಎಂಬ ಸಂಶಯ ವ್ಯಕ್ತವಾಗಿದೆ.

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸಾರ್ವಜನಿಕರು ಕೈ ಜೋಡಿಸಿದ್ದಾರೆ.

- Advertisement -

Related news

error: Content is protected !!