Monday, April 29, 2024
spot_imgspot_img
spot_imgspot_img

ಬಂಟ್ವಾಳ: ಕಾರಿಂಜ ಕ್ಷೇತ್ರದಲ್ಲಿ ಗಣಿಗಾರಿಕೆ; “ಗಣಿಗಾರಿಕಾ ಮುಕ್ತ ಪ್ರದೇಶ” ಎಂದು ಘೋಷಣೆ ಮಾಡದೆ ಇದ್ದಲ್ಲಿ ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಹೋರಾಟದ ಎಚ್ಚರಿಕೆ

- Advertisement -G L Acharya panikkar
- Advertisement -
vtv vitla

ಬಂಟ್ವಾಳ: ಕಾರಿಂಜ ಕ್ಷೇತ್ರವನ್ನು ಗಣಿಗಾರಿಕೆಯಿಂದ ರಕ್ಷಿಸಲು ಸುಮಾರು 8 ವರ್ಷದಿಂದ ಅನೇಕ ತರದ ಹೋರಾಟಗಳು ನಡೆದುಕೊಂಡು ಬಂದಿದೆ. ಕಳೆದ 2 ವರ್ಷದಿಂದ ಹಿಂ.ಜಾ.ವೇ ಬಂಟ್ವಾಳ ತಾಲೂಕು ಸಮಿತಿಯು ಉಗ್ರ ಹೋರಾಟವನ್ನು ಮಾಡಿ ಈಗ ಗಣಿಗಾರಿಕೆ ನಿಷೇಧ ಕಾನೂನು ಜಾರಿಗೆ ಬರುವ ಕೊನೆಯ ಹಂತದಲ್ಲಿ ಇದೆ, ಆದರೆ ಗಣಿಗಾರಿಕೆ ಮಾಡುವ ಕೊರೆ ಮಾಲೀಕರು ಸೇರಿ ಈ ಪ್ರದೇಶದಲ್ಲಿ ಹೊಸ ತರಹದಲ್ಲಿ ಕಲ್ಲು ಕಟ್ಟು ಮಾಡುವ ಪರ್ಮಿಷನ್ ಪಡೆಯುವ ಯೋಜನೆ ಸದ್ದಿಲ್ಲದೆ ನಡೆಯುತ್ತಿದೆ.

ಇದಕ್ಕೆ ಕೆಲವು ನಾಲಾಯಕ್ ಗಳ ಬೆಂಬಲವೂ ವ್ಯಕ್ತವಾಗುತ್ತಿದೆ. ಈ ಕಾರಣದಿಂದಾಗಿ ಚುನಾವಣೆ ಹತ್ತಿರ ಬಂದರೂ ಗಣಿಗಾರಿಕಾ ಮುಕ್ತ ಪ್ರದೇಶ ಮಾಡುವ ಯೋಜನೆಗೆ ಸಹಿ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿ ಆಗಲು 15ದಿವಸ ಇರುವುದರಿಂದ ಅಲ್ಲಿಯವರೆಗೆ ಕಾದು ನೋಡಿ, ಒಂದು ವೇಳೆ ಗಣಿಗಾರಿಕಾ ಮುಕ್ತ ಪ್ರದೇಶ ಎಂದು ಕಾರಿಂಜ ಕ್ಷೇತ್ರವನ್ನು ಘೋಷಣೆ ಮಾಡದೆ ಇದ್ದಲ್ಲಿ ಮುಂದಿನ ಹೋರಾಟದ ರುಪರೇಶವನ್ನು ನಿಗದಿ ಮಾಡಲು ಭೈಠಕ್ ದಿನಾಂಕವನ್ನು ತಿಳಿಸಲಾಗುವುದು ಎಂದು ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ಎಚ್ಚರಿಕೆ ನೀಡಿದೆ.

- Advertisement -

Related news

error: Content is protected !!