Thursday, June 18, 2026
spot_imgspot_img
spot_imgspot_img

ಬಂಟ್ವಾಳ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಮರದ ಗೆಲ್ಲು ಮತ್ತು ವಿದ್ಯುತ್ ಕಂಬ; ಸವಾರನಿಗೆ ಗಾಯ

- Advertisement -
- Advertisement -

ಬಂಟ್ವಾಳ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರದ ಗೆಲ್ಲು ಬಿದ್ದ ಪರಿಣಾಮ ಸವಾರ ಗಾಯಗೊಂಡ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಸ್.ವಿ.ಎಸ್ ಕಾಲೇಜು ಬಳಿ ನಡೆದಿದೆ.

ಗಾಯಗೊಂಡವರನ್ನು ಗೋಳಿಪಡ್ಪು ನಿವಾಸಿ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಇವರು ಎಸ್.ವಿ.ಎಸ್ ಕಾಲೇಜಿನ ಸಮೀಪದ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಮರದ ಗೆಲ್ಲು ವಿದ್ಯುತ್ ಕಂಬಕ್ಕೆ ಬಿದ್ದು ಬಳಿಕ ಗೆಲ್ಲು ಹಾಗೂ ವಿದ್ಯುತ್‌ ಕಂಬ ಎರಡೂ ಒಟ್ಟಿಗೆ ಸ್ಕೂಟರ್ ಮೇಲೆ ಉರುಳಿಬಿದ್ದಿದೆ. ಪರಿಣಾಮ ವಾಹನ ಜಖಂಗೊಂಡಿದ್ದು, ಸವಾರ ಇಸ್ಮಾಯಿಲ್ ಎಂಬವರಿಗೆ ಗಾಯವಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!