Thursday, April 25, 2024
spot_imgspot_img
spot_imgspot_img

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

- Advertisement -G L Acharya panikkar
- Advertisement -

ಬಂಟ್ವಾಳ: ಅಮ್ಮುಂಜೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಬಂಟ್ವಾಳ ತಾಲೂಕು 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಎಂ. ಪಿ‌ ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ಅಮ್ಮುಂಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ದ ಆಡಳಿತ ಟ್ರಸ್ಟೀಗಳಾದ ಡಾ.ಎ.ಮಂಜಯ್ಯ ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಕೋಶಾಧಿಕಾರಿ ಡಿ. ಬಿ.ಅಬ್ದುಲ್ ರಹಮಾನ್, ಶಾಲಾ ಮುಖ್ಯೋಪಾಧ್ಯಾಯಿನಿ ಸುಗುಣ, ಅಮ್ಮಂಜೆ ಗ್ರಾ. ಪಂ. ಅಧ್ಯಕ್ಷ ವಾಮನ ಆಚಾರ್ಯ, ಕರಿಯಂಗಳ ಗ್ರಾಮ ಪಂಚಾಯತ್ ಪಿ.ಡಿ.ಒ ಮಾಲಿನಿ ಮತ್ತು ಅಮ್ಮುಂಜೆ ಗ್ರಾ. ಪಂ ಪಿಡಿಒ ನಯನ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ವಿಟ್ಲ ಹೋಬಳಿ ಕಸಾಪ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ಪಾಣೆಮಂಗಳೂರು ಹೋಬಳಿ ಕಸಾಪ ಅಧ್ಯಕ್ಷ ಪಿ ಮಹಮ್ಮದ್, ಕಸಾಪ ಪದಾಧಿಕಾರಿಗಳಾದ ಸಂಕಪ್ಪ ಶೆಟ್ಟಿ, ಝಫರಿನ್ ಡಿ ಸೋಜ, ಬಿ.ಎಂ.ಅಬ್ಬಾಸ್ ಅಲಿ, ಎಂ ಡಿ‌ ಮಂಚಿ, ರವೀಂದ್ರ ಕುಕ್ಕಾಜೆ, ಅನೀಶ್ ಬಾಳಿಕೆ, ಬಂಟ್ವಾಳ ಬಳಕೆದಾರರ ವೇದಿಕೆ ಸಂಚಾಲಕ ಸುಂದರ್ ರಾವ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಭೆಯನ್ನು ಸಂಯೋಜನೆ ಮಾಡಿದ ಕಸಾಪ ಪದಾಧಿಕಾರಿ ಅಬೂಬಕರ್ ಅಮ್ಮುಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮದ ರೂಪುರೇಷೆ ವಿವರಿಸಿದರು. ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಪ್ರಸ್ತಾವನೆ ಗೈದರು.ಬಿ.ಜನಾರ್ದನ ಅಮ್ಮುಂಜೆ ವಂದನಾರ್ಪಣೆ ಗೈದರು.

- Advertisement -

Related news

error: Content is protected !!