Saturday, July 25, 2026
spot_imgspot_img
spot_imgspot_img

ಬಂಟ್ವಾಳ: ಬಸ್ ಸ್ಕೂಟರ್ ನಡುವೆ ಅಪಘಾತ; ಸವಾರ ಗಂಭೀರ

- Advertisement -
- Advertisement -

ಬಂಟ್ವಾಳ: ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ನಿವಾಸಿ ಮಹಮ್ಮದ್ ಸುಹೈಲ್ (40) ಎಂಬವರು ಗಾಯಗೊಂಡ ವ್ಯಕ್ತಿ.

ಬಂಟ್ವಾಳ ಕೆಳಗಿನ ಪೇಟೆಗೆ ಬಂದು ಬಂಟ್ವಾಳ ಪೇಟೆ ಯಾಗಿ ಬೆಳ್ತಂಗಡಿ ಗೆ ತೆರಳುವ ವೇಳೆ ಜಕ್ರಿಬೆಟ್ಟು ಜಂಕ್ಷನ್ ನಲ್ಲಿ ಅಪಘಾತ ನಡೆದಿದೆ. ಬಂಟ್ವಾಳ ಪೇಟೆಯಿಂದ ಜಕ್ರಿಬೆಟ್ಟು ಜಂಕ್ಷನ್ ಭಾಗದಲ್ಲಿ ಧರ್ಮಸ್ಥಳ ರಸ್ತೆಗೆ ಕ್ರಾಸಿಂಗ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ರು ತಿಳಿಸಿದ್ದಾರೆ. ಇದೊಂದು ಅವೈಜ್ಞಾನಿಕ ರೀತಿಯ ಕ್ರಾಸಿಂಗ್ ಆಗಿದ್ದು ಅನೇಕ ಬಾರಿ ಈ ಭಾಗದಲ್ಲಿ ಅಪಘಾತ ಗಳು ನಡೆದು ಪ್ರಾಣಹಾನಿ ಕೂಡ ಸಂಭವಿಸಿದೆ. ಅಗತ್ಯವಿಲ್ಲದ ರಸ್ತೆ ಗಳಲ್ಲಿ ರಸ್ತೆ ಹಂಪ್ಸ್ ಗಳನ್ನು ಹಾಕುವ ಬದಲು ಇಂತಹ ಅಪಘಾತಗಳು ನಡೆಯುವ ರಸ್ತೆಯ ಲ್ಲಿ ಹಂಪ್ಸ್ ಹಾಕುವಂತೆ ಸಾರ್ವಜನಿಕ ರು ಒತ್ತಾಯಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲಿಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!