Monday, August 3, 2026
spot_imgspot_img
spot_imgspot_img

ಬಂಟ್ವಾಳ: ಮಡಿವಾಳ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ

- Advertisement -
- Advertisement -
vtv vitla
vtv vitla
vtv vitla

ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ(ರಿ) ಕಂದೂರು ಹಾಗೂ ಮಡಿವಾಳ ಯುವ ಬಳಗ ಬಂಟ್ವಾಳ ಮತ್ತು ಮಹಿಳಾ ಸಮಿತಿ ಇದರ ಆಶ್ರಯದಲ್ಲಿ ಮಡಿವಾಳ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟವು ದಿನಾಂಕ 04 – 12 – 2021 ರಂದು ಕಂದೂರಿನ ಶ್ರೀ ಮಾಚಿದೇವ ಸಭಾಭವನದ ವಠಾರದಲ್ಲಿ ಜರುಗಿತು.

ಪಿ.ಸಿ ಗ್ರೂಪ್ ಮಂಗಳೂರು ಇದರ ಮುಖ್ಯ ಪ್ರಬಂಧಕರಾಗಿರುವ ಹರೀಶ್ ಕುದುಂಬ್ಲಾಡಿಯವರು ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್ ಕೆ ಶಿವ ಅಧ್ಯಕ್ಷತೆ ವಹಿಸಿದ್ದರು. ಯುವಬಳಗದ ವತಿಯಿಂದ ಎಲ್ಲಾ ಸದಸ್ಯರಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.

vtv vitla

ಸಮಿತಿಯ ಗೌರವ ಸಲಹೆಗಾರ ಸೋಮಪ್ಪ ಮಾಸ್ತರ್ ರಾಯಿ , ಪುಷ್ಪರಾಜ ಕುಕ್ಕಾಜೆ , ಹರೀಶ್ ಮಂಕುಡೆ , ಮಹಿಳಾ ಸಮಿತಿ ಅಧ್ಯಕ್ಷೆ ವಿನೋದಾ ಬಿ.ಸಿ ರೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಶಾ ಪಂಜಿಕಲ್ಲು ಪ್ರಾರ್ಥಿಸಿದರು, ಯುವ ಬಳಗದ ಅಧ್ಯಕ್ಷ ದಿಲೀಪ್ ಪಂಜಿಕಲ್ಲು ಸ್ವಾಗತಿಸಿ, ಕಾರ್ಯದರ್ಶಿ ವನೀತ್ ವಂದಿಸಿದರು. ವೆಂಕಟೇಶ ಮಾಸ್ತರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

vtv vitla
vtv vitla
vtv vitla
- Advertisement -

Related news

error: Content is protected !!