Sunday, June 21, 2026
spot_imgspot_img
spot_imgspot_img

ಬಂಟ್ವಾಳ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು..!

- Advertisement -
- Advertisement -

ಬಂಟ್ವಾಳ : ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಎಂಬಲ್ಲಿ ನಡೆದಿದೆ.

ಸಿದ್ಧಕಟ್ಟೆಯ ಶ್ರೀಮಂಗಳ ಉರ್ಬನ ಕೌಂಪೌಂಡ್ ನ ಚಂದ್ರಶೇಖರ್ ಸಾಲ್ಯಾನ್ ಎಂಬವರ ಮನೆಗೆ ನುಗ್ಗಿದ ಕಳ್ಳರು 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಕದ್ದಿದ್ದಾರೆ. ಜೂ 11 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಡಬಿದ್ರೆಯ ಅರಬೀಯನ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ತಮ್ಮ ಪತ್ನಿಗೆ ಜ್ವರವಿದ್ದ ಕಾರಣ ಮೂಡಬಿದರೆಯ ತನ್ನ ಅತ್ತೆ ಮನೆಯಲ್ಲೇ ಜೂನ್ 11 ರಿಂದ 13ರವರಗೆ ತಂಗಿದ್ದರು. ಜೂನ್ 13 ರಂದು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!