Thursday, June 18, 2026
spot_imgspot_img
spot_imgspot_img

ಬಂಟ್ವಾಳ: ರೈಲ್ವೇ ಹಳಿ ಮೇಲೆ ಯುವಕ ಶವ ಪತ್ತೆ ಪ್ರಕರಣ; ಸೂಕ್ತ ತನಿಖೆ ನಡೆಸುವಂತೆ ಹಿಂದು ಜಾಗರಣ ವೇದಿಕೆಯಿಂದ ಮನವಿ

- Advertisement -
- Advertisement -

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಕಾರ್ತಿಕ್ ಪೂಜಾರಿ ಬಿನ್ ಲಕ್ಷ್ಮಣ ಪೂಜಾರಿ ಯವರು ರೈಲಿನ ಹಳಿಯ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಮೃತ ಪಟ್ಟಿದ್ದು, ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬಂಟ್ವಾಳ ಉಪವಿಭಾಗ ಡಿವೈಎಸ್ ಪಿ ಯವರಿಗೆ ಹಿಂದು ಜಾಗರಣ ವೇದಿಕೆ ಬಂಟ್ವಾಳ ವತಿಯಿಂದ ಮನವಿ ಸಲ್ಲಿಸಲಾಯಿತು. ಇದು ಸಾಮಾನ್ಯ ಸಾವು ಅಲ್ಲ. ಇದರ ಹಿಂದೆ ವೈಷಮ್ಯ ಇದೆ ಎಂಬ ಸಂಶಯ ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ಬಂಟ್ವಾಳ: ರೈಲ್ವೆ ಹಳಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆ!

ಜು 26 ರಂದು ಕಾರ್ತಿಕ್ ಪೂಜಾರಿಯವರ ಮೇಲೆ ದೆಮುಂಡೆ ಎಂಬಲ್ಲಿ ಶರೀಫ್ ಟಿ ಕೆ, ಸೊಹೇಲ್, ನಾಸಿರ್ ಎಂಬವರಿಂದ ಹಲ್ಲೆ ನಡೆದಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಇದರ ಬೆನ್ನಿಗೆ ಕಾರ್ತಿಕ್ ಪೂಜಾರಿಯವರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಅನುಮಾನಕ್ಕೆ ಕಾರಣವಾಗಿದೆ.

ಆದ್ದರಿಂದ ಇದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹಿಂದು ಜಾಗರಣ ವೇದಿಕೆ ವತಿಯಿಂದ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಜಿಲ್ಲಾ ನ್ಯಾಯ ಜಾಗರಣ ಪ್ರಮುಕ್ ರಾಜೇಶ್ ಬೊಳ್ಳುಕಲ್ಲು, ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕ್ ಅಧ್ಯಕ್ಷರು ತಿರುಲೇಶ್ ಬೆಳ್ಳೋರು, ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಕಾರ್ಯದರ್ಶಿ ಹರೀಶ್ ತಲೆಂಬಿಲ, ಹಿಂದು ಜಾಗರಣ ವೇದಿಕೆ ಬಂಟ್ವಾಳ ಹಿಂದು ಯುವ ವಾಹಿನಿ ಸಂಯೋಜಕ್ ತಿಲಕ್ ಅಮ್ಮಡಿ ಉಪಸ್ಥಿತರಿದ್ದರು.

- Advertisement -

Related news

error: Content is protected !!