Saturday, June 6, 2026
spot_imgspot_img
spot_imgspot_img

ಬಂಟ್ವಾಳ: ರ‍್ಯಾಂಕ್ ಗಳಿಸಿದ್ದ ವಿಶೇಷ ಚೇತನ ವಿದ್ಯಾರ್ಥಿ ಆದಿತ್ಯ ಇನ್ನಿಲ್ಲ

- Advertisement -
- Advertisement -

ಬಂಟ್ವಾಳ: ಬಂಟ್ವಾಳದ ಸೂರಿಕುಮೇರು ನಿವಾಸಿ ಆದಿತ್ಯ ಎನ್ನುವ ವಿಶೇಷಚೇತನ ವಿದ್ಯಾರ್ಥಿ ಅನಾರೋಗ್ಯದಿಂದ ಅಸುನೀಗಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಸಾಲಿನಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯ ಬಿ.ಕಾಂ.ನಲ್ಲಿ 93.8 ಶೇ.ಅಂಕಗಳಿಸಿ 9ನೇ ರ‍್ಯಾಂಕ್ ಪಡೆದಿದ್ದ ವಿಶೇಷಚೇತನ ವಿದ್ಯಾರ್ಥಿ ಆದಿತ್ಯ ಭಟ್(21) ಅನಾರೋಗ್ಯದಿಂದ ಗುರುವಾರ ಮೃತಪಟ್ಟಿದ್ದಾರೆ. ಬಂಟ್ವಾಳದ ಸೂರಿಕುಮೇರು ನಿವಾಸಿಯಾಗಿರುವ ಆದಿತ್ಯ ಬಾಲ್ಯದಿಂದಲೇ ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, SSLCಯಲ್ಲಿ 96.4 ಶೇ., ಪಿಯುಸಿಯಲ್ಲಿ 96 ಶೇ. ಅಂಕ ಪಡೆದಿದ್ದರು.

ಮಾಂಸಖಂಡಗಳ ಕ್ಷೀಣತೆಯ ಪರಿಣಾಮ ದೈಹಿಕ ಅಂಗವಿಕಲತೆಯಿಂದ ಬಳಲಿ ನಡೆಯಲಾಗದ ಸ್ಥಿತಿಯಲ್ಲಿರುವ ಆತನನ್ನು ತಂದೆ ಗಣೇಶ ಭಟ್ ಅವರೇ ಪ್ರತಿದಿನ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದರು. ಆತ ವೀಲ್‌ಚೇರ್‌ನಲ್ಲೇ ಕೂತು ತರಗತಿ ಕೇಳುತ್ತಿದ್ದರು.

- Advertisement -

Related news

error: Content is protected !!