Monday, June 22, 2026
spot_imgspot_img
spot_imgspot_img

ಬಂಟ್ವಾಳ: ವಕೀಲ ಕುಲದೀಪ್‌ ಮೇಲೆ ಹಲ್ಲೆ ಪ್ರಕರಣ; ಪುಂಜಾಲಕಟ್ಟೆ ಠಾಣೆಯ ಪಿಎಸ್‌ಐ ಸುತೇಶ್ ಕೆ.ಪಿ ಎಸ್.ಪಿ ಕಚೇರಿಗೆ ವರ್ಗಾವಣೆ

- Advertisement -
- Advertisement -

ಬಂಟ್ವಾಳ: ಯುವ ವಕೀಲ ಕುಲದೀಪ್ ಶೆಟ್ಟಿರವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿರುವ ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇನ್ಸ್‌ಸ್ಪೆಕ್ಟರ್ ಸುತೇಶ್ ಕೆ.ಪಿ ಅವರನ್ನು ಎಸ್.ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪುಂಜಾಲಕಟ್ಟೆ ಠಾಣೆಯ ಪಿಎಸ್‌ಐ ಆಗಿ ಯಾರನ್ನು ನೇಮಕ ಮಾಡಿಲ್ಲ. ಪುಂಜಾಲಕಟ್ಟೆ ಠಾಣೆಯ ತಾತ್ಕಾಲಿಕ ಚಾರ್ಜ್‌ನ್ನು ಬೆಳ್ತಂಗಡಿ ಪಿಎಸ್‌ಐ ನಂದಕುಮಾರ್‌ ಎಂ.ಎಂ ನೀಡಲಾಗಿದೆ.

ಪಿಎಸ್‌ಐ ನಂದಕುಮಾರ್‌ ಎಂ.ಎಂ

ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟ ರ್ ಸುತೇಶ್ ಕೆ.ಪಿ ಮತ್ತು ಸಿಬ್ಬಂದಿಗಳು ಜಾಗದ ವಿಚಾರವೊಂದರ ಪ್ರ ಕರಣದಲ್ಲಿ ವಕೀಲರಾದ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು . ಈ ಬಗ್ಗೆ ಅವರಮೇಲೆ ಕ್ರಮಕೈಗೊಳ್ಳುವಂತೆ ವಕೀಲರಸಂಘದಿಂದ ಪ್ರ ತಿಭಟನೆಕೂಡ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಯಾವುದೇ ವಿಚಾರಣೆ ನಡೆಸದೆ ಇಲಾಖೆಯು ಪುಂಜಾಲಕಟ್ಟೆ ಠಾಣೆಯಪೊಲೀಸ್ ಸಬ್ ಇನ್ಸ್ಪೆ ಕ್ಟ ರ್ ಸುತೇಶ್ ರನ್ನು ನೇರವಾಗಿ ಎಸ್.ಪಿ ಕಚೇರಿಗೆ ವರ್ಗಾವಣೆಮಾಡಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!