Sunday, June 21, 2026
spot_imgspot_img
spot_imgspot_img

ಬಂಟ್ವಾಳ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; KSRTC ಬಸ್ ಡಿಪೋ ನಿರ್ವಾಹಕ ಅರೆಸ್ಟ್..!!

- Advertisement -
- Advertisement -

ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್ಸು ಡಿಪೋ ನಿರ್ವಾಹಕ ಶಾಲಾ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿ.ಸಿ.ರೋಡ್ ಡಿಪೋ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ ಬಾಗಲಕೋಟೆ ಮೂಲದ ದವಾಳ್ ಸಾಬ್ ಎಂದು ಗುರುತಿಸಲಾಗಿದೆ.

ಕಲ್ಲಡ್ಕ ಮೂಲಕ ತನ್ನ ಬಸ್ಸಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಬಂದಿದ್ದು, ಅದೇ ಬಸ್ಸಿನಲ್ಲಿ ಸಂತ್ರಸ್ತ ಬಾಲಕಿಯೂ ಇದ್ದಳು ಎನ್ನಲಾಗಿದೆ. ಬಸ್ಸು ಪಾಣೆಮಂಗಳೂರು ತಲುಪಿದ ಬಳಿಕ ಪ್ರಯಾಣಿಕರು ಇಳಿದಿದ್ದು, ಈ ವೇಳೆ ಚಾಲಕ, ನಿರ್ವಾಹಕ ಹಾಗೂ ಬಾಲಕಿ ಮಾತ್ರ ಇದ್ದರು ಎನ್ನಲಾಗಿದೆ.

ಈ ವೇಳೆ ಆರೋಪಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ದೂರಿದ್ದಾಳೆ. ಬಾಲಕಿಯ ಹೇಳಿಕೆಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಠಾಣಾ ಪೊಲೀಸರು ಘಟನೆಯ ಕೆಲವೇ ಕ್ಷಣಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!