Thursday, April 25, 2024
spot_imgspot_img
spot_imgspot_img

ಬಂಟ್ವಾಳ: ವಿವಾಹಿತ ಮಹಿಳೆ ಆತ್ಮಹತ್ಯೆ ಪ್ರಕರಣ; ಸಾವಿನ ಬಗ್ಗೆ ಪತಿಯಿಂದ ಸಂಶಯ ವ್ಯಕ್ತ- ದೂರು ದಾಖಲು

- Advertisement -G L Acharya panikkar
- Advertisement -
vtv vitla

ಬಂಟ್ವಾಳ: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ಫೆಬ್ರವರಿ 14ರಂದು ಸಜೀಪಪಡು ಗ್ರಾಮದ ಸೇನರಬೆಟ್ಟುವಿನಲ್ಲಿ ನಡೆದಿದ್ದು ಮಹಿಳೆಯ ಸಾವಿನ ಬಗ್ಗೆ ಆಕೆಯ ಪತಿ ಸಂಶಯ ವ್ಯಕ್ತಪಡಿಸಿ, ಆತ್ಮಹತ್ಯೆಗೆ ಪ್ರೇರಣೆ ನೀಡಿದ ವ್ಯಕ್ತಿಯ ವಿರುದ್ದ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯವರಿಗೆ ಮನವಿಯ ಮೂಲಕ ಆಗ್ರಹಿಸಿದ್ದಾರೆ.

ಇಲ್ಲಿನ ನಿವಾಸಿ ಸತೀಶ್ ಪಿ. ಎಂಬವರ ಪತ್ನಿ ಬೀನಾ ಸಿ. ಎಂಬವರು ಕಳೆದ ಫೆಬ್ರವರಿ ತಿಂಗಳ 14 ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ನಡೆದ ಸಂದರ್ಭ ಮಹಿಳೆಯ ಕಿವಿಯಲ್ಲಿ ಇಯರ್ ಪೋನ್ ಇದ್ದು ಆಕೆಯ ಮೊಬೈಲ್ ಪೋನ್ ಕಾಲಿನ ಕೆಳಗಡೆ ಬಿದ್ದಕೊಂಡಿದ್ದುದರಿಂದ ಆತ್ಮಹತ್ಯೆಯು ವ್ಯವಸ್ಥಿತ ಸಂಚು ಎಂಬ ಸಂಶಯ ವ್ಯಕ್ತವಾಗಿದ್ದು, ಆತ್ಮಹತ್ಯೆಗೆ ಪ್ರೇರಣೆ ನೀಡಿದ ವ್ಯಕ್ತಿಯ ವಿರುದ್ದ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿಯ ಮೂಲಕ ಆಗ್ರಹಿಸಿದ್ದಾರೆ.

ಮೃತ ಮಹಿಳೆಯ ಪತಿಯು ಮಂಗಳೂರಿನಲ್ಲಿ ಕೆಲಸದಲ್ಲಿದ್ದು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು, ಈ ಸಂದರ್ಭ ಅವಿವಾಹಿತ ಯುವಕನೋರ್ವನ ಪರಿಚಯವಾಗಿ ಮಹಿಳೆ ಆತನೊಂದಿಗೆ ಸಲುಗೆಯಿದ್ದ ಇದ್ದಿರುವುದು ತಿಳಿದು ಬಂದಿದೆ. ಯುವಕ ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ, ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ 10 ದಿನಗಳ ಮೊದಲು ಸ್ನೇಹಿತನ ಮೊಬೈಲ್‌ನಿಂದ ಆಕೆಯ ತಾಯಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಿದ್ದಾಳೆ ಎಂದು ತಿಳಿಸಿದ್ದು, ಆ ದಿನ ಬೀನಾ ಅವರನ್ನು ಅವರ ತಾಯಿ ವಿಚಾರಿಸಿದಾಗ ಯುವಕ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುರುವುದಾಗಿ ತಿಳಿಸಿದ್ದಳು. ಮಹಿಳೆ ಆತ್ಮಹತ್ಯೆ ಮಾಡಿಕೊಂಡ ದಿನವೂ ಯುವಕ ತಾಯಿಗೆ ಪೋನ್ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಎಂದು ತಿಳಿಸಿದ್ದಾನೆ. ಘಟನೆಯ ಬಳಿಕ ಮನೆಯನ್ನು ಶೋಧಿಸಿದಾಗ ಯುವಕನ ಬ್ಯಾಂಕ್ ಪಾಸ್ ಪುಸ್ತಕ ಸಹಿತ ಅನುಮಾನಸ್ಪದ ವಸ್ತುಗಳು ಮನೆಯಲ್ಲಿ ದೊರೆತ್ತಿದ್ದು ಮಹಿಳೆಯ ಸಾವಿನ ಹಿಂದೆ ಸಂಶಯ ಇದ್ದು ಆತ್ಮಹತ್ಯೆಗೆ ಯುವಕ ಪ್ರಚೋದನೆ ನೀಡಿದ್ದಾನೆ ಎನ್ನುವ ಆರೋಪವನ್ನು ಮೃತ ಮಹಿಳೆಯ ಪತಿ ಮಾಡಿದ್ದಾರೆ. ಘಟನೆ ನಡೆದು ಸುಮಾರು 20 ದಿನಗಳ ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!