Sunday, June 14, 2026
spot_imgspot_img
spot_imgspot_img

ಬೆಳ್ಳಂಬೆಳಗ್ಗೆ ವಿಟ್ಲ ಪೇಟೆಯಲ್ಲಿ ಹೊಡೆದಾಟ: ಬಲತ್ಕಾರವಾಗಿ ಅಂಗಡಿ ತೆರವು ಮಾಡಲು ಬಂದವರಿಗೆ ಗೂಸಾ-ಪಕ್ಕದ ಮೆಡಿಕಲ್ ಮಾಲಕನ ಕುಮ್ಮಕ್ಕು

- Advertisement -
- Advertisement -

ವಿಟ್ಲಅ31: ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಹಾರ್ಡ್ ವೇರ್ ಅಂಗಡಿ ನಡೆಸಿಕೊಂಡು ಬರುತ್ತಿರುವ ಶಂಕರ್ ನಾರಾಯಣ್ ಕಾರಂತ್ ಅವರ ಅಂಗಡಿಯನ್ನು ಇಂದು ಬೆಳಿಗ್ಗೆ ಸುಮಾರು 20 ಜನರ ತಂಡ ಏಕಾಏಕಿ ಅಂಗಡಿಯೊಳಗಡೆ ನುಗ್ಗಿ ಪೈಂಟ್ ಮತ್ತು ಇನ್ನಿತರ ವಸ್ತುಗಳನ್ನು ಎಸೆಯುತ್ತಿದ್ದು, ಬಲತ್ಕಾರವಾಗಿ ಅಂಗಡಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು ಈ ಬಗ್ಗೆ ವಿಚಾರಿಸಿ, ಮಾತುಕತೆ ನಡೆಸಲು ಮುಂದಾಗಿದ್ದರು. ಬಳಿಕ ಸ್ಥಳೀಯರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದು ಒಂದೇ ಕುಟುಂಬದ ವ್ಯವಹಾರದ ವಿಚಾರವಾಗಿದ್ದು, ಇದಕ್ಕೆ ಸ್ಥಳೀಯ ಮೆಡಿಕಲ್ ಉದ್ಯಮಿಯೊಬ್ಬರ ಸಹಕಾರದಿಂದ ಅಂಗಡಿ ತೆರವುಗೊಳಿಸಲು ಈ ತಂಡ ಮುಂದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಲ್ಲೆಗೆ ಮುಂದಾದ ತಂಡ ಜಿಲ್ಲೆಯ ರಾಜಕಾರಣಿಯೊಬ್ಬರ ಹೆಸರನ್ನು ದುರ್ಬಳಕ್ಕೆ ಮಾಡಿಕೊಂಡು ಈ ಕೃತ್ಯಕ್ಕೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!