Monday, April 29, 2024
spot_imgspot_img
spot_imgspot_img

ಬಂಟ್ವಾಳ: ಸರ್ಕಾರಿ ಜಾಗದಲ್ಲಿ ಅನಧಿಕೃತ ಶಿಲುಬೆ..!? ಹಿಂಜಾವೇಯಿಂದ ಪ್ರತಿಭಟನೆಯ ಎಚ್ಚರಿಕೆ

- Advertisement -G L Acharya panikkar
- Advertisement -

ಬಂಟ್ವಾಳ ತಾಲೂಕಿನ ಸರಪಾಡಿ ಹಾಗೂ ನಾವೂರ ಗ್ರಾಮಕ್ಕೆ ಹೊಂದಿಕೊಂಡಿರುವ ಅಲ್ಲಿಪಾದೆ ಎಂಬಲ್ಲಿ ಸಂತ ಜೋನ್ ಚರ್ಚ್‌ನ ಮುಂಭಾಗದಲ್ಲಿ ಸರಕಾರಿ ಜಾಗ ಇದೆ. ಈ ಸರಕಾರಿ ಜಾಗದಲ್ಲಿ ರಾತೋರಾತ್ರಿ ಏಸುವಿನ ಪ್ರತಿಮೆ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದು ಕಾನೂನು ಬಾಹಿರವಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಪ್ರತಿಮೆಯ ಸುತ್ತಲೂ ಅನಧಿಕೃತ ಆವರಣವನ್ನು ನಿರ್ಮಿಸಲಾಗಿದ್ದು ಇದರಿಂದ ಈ ಪ್ರದೇಶದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗಿರುತ್ತದೆ. ಅನಧಿಕೃತ ಏಸುವಿನ ಪ್ರತಿಮೆಯನ್ನು ತೆರವುಗೊಳಿಸದಿದ್ದರೆ ಅಲ್ಲಿ ಉಂಟಾಗುವ ಕೋಮು ಸಂಘರ್ಷಕ್ಕೆ ಚರ್ಚ್‌ ಹೊಣೆಯಾಗುತ್ತದೆ ಎಂದು ಹಿಂಜಾವೇ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಬಂಟ್ವಾಳ ತಹಶೀಲ್ದಾರರಿಗೆ ಹಿಂದೂ ಜಾಗರಣ ವೇದಿಕೆ ಸರಪಾಡಿ ವಲಯ ಬಂಟ್ವಾಳ ತಾಲೂಕು ದೂರು ನೀಡಿದ್ದಾರೆ.

- Advertisement -

Related news

error: Content is protected !!