Thursday, April 25, 2024
spot_imgspot_img
spot_imgspot_img

ಬಂಟ್ವಾಳ: “ಸಿಂತಾನಿಕಟ್ಟೆ” ಎಂಬ ನಾಮಫಲಕವನ್ನು ಆಳವಡಿಸಲು ಹಿಂ.ಜಾ.ವೇ ಮನವಿ

- Advertisement -G L Acharya panikkar
- Advertisement -

ಬಂಟ್ವಾಳ: ಹಿಂದು ಜಾಗರಣ ವೇದಿಕೆ ಸರಪಾಡಿ ವತಿಯಿಂದ ಬಂಟ್ವಾಳ ತಾಲೂಕಿನ ನಾವೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಿಂತಾನಿಕಟ್ಟೆಯಲ್ಲಿ ನಾಮ ಫಲಕ ಆಳವಡಿಸುವ ಬಗ್ಗೆ ಮನವಿ ಮಾಡಿಕೊಂಡಿದೆ. ಸುಮಾರು ನೂರಾರು ವರ್ಷಗಳಿಂದ ನಾವೂರು ಪಂಚಾಯತ್ ವ್ಯಾಪ್ತಿಯ (ಈಗಿನ ಟೆಲಿಫೋನ್‌ಎಕ್ಸೆಂಜ್ ಇರುವ ಪ್ರದೇಶ) ಸಿಂತಾನಿಕಟ್ಟೆ ಹೆಸರಿನಿಂದ ಕರೆಯಲಾಗುತಿತ್ತು, ಆದರೆ ಸದ್ಯ ಈ ಪ್ರದೇಶವನ್ನು ಬೇರೆ ಬೇರೆ ಕಾರಣಗಳಿಗೊಸ್ಕರ ಹೊಸ ಹೊಸ ಹೆಸರನ್ನಿಡಲು ಕಸರತ್ತುಗಳು ನಡೆಯುತ್ತಿದೆ ಎಂದು ಊರಿನ ಜನರ ಅಭಿಪ್ರಾಯವಾಗಿದೆ.

ಹೀಗಾಗಿ ಹಿರಿಯರ ಕಾಲದಿಂದಲೂ ಕರೆದುಕೊಂಡು ಬಂದಿರುವ ಊರಿನ ಹೆಸರು ಬದಲಾಯಿಸುದನ್ನು ಹಿಂದೂ ಜಾಗರಣಾ ವೇದಿಕೆ ಖಂಡಿಸಿದ್ದಾರೆ, ಹಾಗಾಗಿ ಪರಿಸರದಲ್ಲಿ ಊರಿನ ಹೆಸರಾದ ಸಿಂತಾನಿಕಟ್ಟೆ ಎಂಬುದನ್ನು ಉಳಿಸಲು ಈ ಪ್ರದೇಶದ ಎಲ್ಲಾ ನಾಗರೀಕರು ಸೇರಿ “ಸಿಂತಾನಿಕಟ್ಟೆ” ಎಂಬ ನಾಮಫಲಕವನ್ನು ಆಳವಡಿಸಲು ಅನುಮತಿ ಕೋರಿ ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯ ಜಾಗರಣ ಪ್ರಮೂಖರಾದ ರಾಜೇಶ ಬೋಲ್ಲುಕಲ್ಲು, ವಲಯ ಅಧ್ಯಕ್ಷರಾದ ನಾಗೇಶ, ರಕ್ಷಿತ್ ಅಲ್ಲೀಪಾದೇ,ರವಿ ಸಿಂತಾನಿಕಟ್ಟೇ, ಸುರೇಶ ಸಿಂತಾನಿ ಕಟ್ಟೇ, ತೇಜಾಕ್ಷ ಸಿಂತಾನಿಕಟ್ಟೆ ಉಪಸ್ಥಿತರಿದ್ದರು.

- Advertisement -

Related news

error: Content is protected !!