Saturday, June 13, 2026
spot_imgspot_img
spot_imgspot_img

ಬಂಟ್ವಾಳ: ಹುಲ್ಲು ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

- Advertisement -
- Advertisement -

ಮನೆಯ ಅಂಗಳದಲ್ಲಿ ಮೆಷಿನ್ ಮೂಲಕ  ಹುಲ್ಲು ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದ ಕಾರಣ ಬಾಗಲಕೋಟ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ.

ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಘಟನೆ ನಡೆದಿದೆ.ಬಾಗಲಕೋಟ ನಿವಾಸಿ ಯಮನಪ್ಪ (38) ವಿದ್ಯುತ್ ಶಾಕ್ ಹೊಡೆದದ ಸಾವನ್ನಪ್ಪಿದ್ದಾನೆ.

ಅಂಗಳದಲ್ಲಿ ಬೊರ್ ವೆಲ್ ಒಂದಿದ್ದು,ಇದರೊಳಗಿರುವ ಪಂಪ್ ಗೆ ನೀಡಲಾದ ವಿದ್ಯುತ್ ಸಂಪರ್ಕದ ವಯರನ್ನು ಈತನ ಗೋಚರಕ್ಕೆ ಬರದೆ ಕತ್ತರಿಸಿದ್ದಾನೆ. ಅವೇಳೆ ವಿದ್ಯುತ್ ಹರಿದು ಈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್.ಐ.ರಾಮಕೃಷ್ಣ ಅವರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!