Wednesday, June 17, 2026
spot_imgspot_img
spot_imgspot_img

ಬಡ ಕುಟುಂಬದ ಬಾಳಿಗೆ ಬೆಳಕಾದ ಕುಂಬಳೆ ಘಟಕದ ವಿಪತ್ತು ನಿರ್ವಹಣಾ ತಂಡ

- Advertisement -
- Advertisement -

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕುಂಬಳೆ ವಲಯದ ಶ್ರೀ ವಿನಾಯಕ ಸಂಘದ ಸದಸ್ಯೆ ಶ್ರೀಮತಿ ಕಮಲಾಕ್ಷಿ ದಂಪತಿಗಳ ಮನೆ ರಿಪೇರಿ ಹಾಗೂ ವಠಾರ ಸ್ವಚ್ಛತಾ ಕಾರ್ಯಕ್ರಮ ಕುಂಬಳೆ ವಿಪತ್ತು ನಿರ್ವಹಣಾ ತಂಡದಿಂದ ಮಾಡಲಾಯಿತು.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಮಲಾಕ್ಷಿ ದಂಪತಿಗಳು ತೀವ್ರ ಬಡತನದಿಂದ ಜೀವ ಸಾಗಿಸುತ್ತಿದ್ದಾರೆ. ವಾಸಿಸಲು ಯೋಗ್ಯವಲ್ಲದ ಮನೆಯಲ್ಲಿ ದಿನ ಕಳೆಯುತ್ತಿದ್ದರು. ಇದೀಗ ಈ ಕುಟುಂಬದ ಬಾಳಿಗೆ ಬೆಳಕಾದ ಕುಂಬಳೆ ಘಟಕ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮನೆಯ ಮೇಲ್ಚಾವಣಿ ರಿಪೇರಿ ಮಾಡಿ ವಠಾರ ಸ್ವಚ್ಛ ಗೊಳಿಸಿ ಬಡ ಕುಟುಂಬದ ಬಾಳಿಗೆ ಬೆಳಕಾಗಿದ್ದಾರೆ.

- Advertisement -

Related news

error: Content is protected !!